ಸೂರ್ಯಗ್ರಹಣ: ಪುತ್ತೂರು ನಗರದಲ್ಲಿ ಜನ, ವಾಹನ ಓಡಾಟ ವಿರಳ

Update: 2020-06-21 13:38 GMT

ಪುತ್ತೂರು: ವರ್ಷದ ಅತೀ ದೊಡ್ಡ ಚೂಡಾಮಣಿ ರಾಹುಗ್ರಸ್ತ ಸೂರ್ಯ ಗ್ರಹಣದ ಹಿನ್ನಲೆಯಲ್ಲಿ ರವಿವಾರ ಪುತ್ತೂರು ನಗರದಲ್ಲಿ ವಾಹನ ಮತ್ತು ಜನರ ಓಡಾಟ ವಿರಳವಾಗಿತ್ತು. 

ದೇವಾಲಗಳಲ್ಲಿ ಮದ್ಯಾಹ್ನದ ಪೂಜೆಯನ್ನು ಬೆಳಗ್ಗೆ ನೆರವೇರಿಸಿದ ಬಳಿಕ ದೇವಾಲಯಗಳ ಬಾಗಿಲು ಮುಚ್ಚಲಾಗಿತ್ತು. ನಗರದಲ್ಲಿ ಎಲ್ಲಾ ಹೋಟೆಲ್ ಬಂದ್ ಆಗಿತ್ತು. ಬೇಕರಿ ಇನ್ನಿತರ ಅಂಗಡಿಗಳು ಬೆಳಗ್ಗಿನ ವೇಳೆ ತೆರದಿದ್ದರೂ ಸುಮಾರು 10.30ರ ಬಳಿಕ ಬಂದ್ ಆಗಿತ್ತು. ಸಾರ್ವಜನಿಕರ ಓಡಾಟ ಕಡಿಮೆಯಾಗಿದದ್ದರೂ ಕೆಸ್ಸಾರ್ಟಿಸಿ ಬಸ್ಸು ಮತ್ತು ಆಟೋ ರಿಕ್ಷಾಗಳು ಓಡಾಟ ನಡೆಸುತ್ತಿದ್ದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News