ಉಡುಪಿಯಲ್ಲಿ ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆ
ಉಡುಪಿ, ಜೂ.21: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ 11ನೇ ಸಂಸ್ಥಾಪನಾ ದಿನವನ್ನು ಉಡುಪಿಯಲ್ಲಿ ರವಿವಾರ ಆಚರಿಸಲಾಯಿತು.
ಎಸ್‌ಡಿಪಿಐ ಉಡುಪಿ ಜಿಲ್ಲಾ ಕಾರ್ಯದರ್ಶಿ ಇಲ್ಯಾಸ್ ಸಾಸ್ತನ ಧ್ವಜಾರೋಹಣ ನೆರವೇರಿಸಿದರು. ನಂತರ ಇತ್ತೀಚೆಗೆ ಭಾರತದ ಗಡಿಯಲ್ಲಿ ನಡೆಸಿದ ಚೀನಾದ ಹಿಂಸಾತ್ಮಕ ಘಟನೆಯನ್ನು ಖಂಡಿಸಿ, ಹುತಾತ್ಮರಾದ ದೇಶದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪಿಎಫ್‌ಐ ಉಡುಪಿ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಬಾವ, ಜಿಲ್ಲಾ ನಾಯಕ ರಾದ ಮುನೀರ್ ಕಲ್ಮಾಡಿ, ಆದಿಉಡುಪಿ ಕಾರ್ಯದರ್ಶಿ ಸಫಾಜ್, ವಲಯ ಸಮಿತಿ ಸದಸ್ಯರುಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ತೌಹಿದ್ ಆದಿಉಡುಪಿ ಸ್ವಾಗತಿಸಿ, ವಂದಿಸಿದರು.
ಉಚ್ಚಿಲ: ಎಸ್‌ಡಿಪಿಐ 11ನೇ ಸಂಸ್ಥಾಪನಾ ದಿನದ ಅಂಗವಾಗಿ ಉಚ್ಚಿಲದ ಭಾಸ್ಕರ ನಗರದಲ್ಲಿರುವ ಪಕ್ಷದ ಕಚೇರಿ ಮುಂಭಾಗದಲ್ಲಿ ಎಸ್‌ಡಿಪಿಐ ಉಚ್ಚಿಲ ಪಂಚಾಯತ್ ಕಮಿಟಿ ಅಧ್ಯಕ್ಷ ಮಜೀದ್ ಪೊಲ್ಯ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಗಡಿಯಲ್ಲಿ ದೇಶಕ್ಕಾಗಿ ವೀರಮರಣವನ್ನಪ್ಪಿದ ಯೋಧರಿಗೆ ಶಾಂತಿಕೋರಿ ಮೌನ ಪ್ರಾರ್ಥನೆ ನಡೆಸಲಾಯಿತು. ಎಸ್‌ಡಿಪಿಐ ಕಾಪು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಬ್ರಾರ್ ಉಚ್ಚಿಲ, ಎಸ್‌ಡಿಪಿಐ ಅಧ್ಯಕ್ಷ ಆಸೀಫ್ ವೈಸಿ, ಆ್ಯಂಬುಲೆನ್ಸ್ ಉಸ್ತುವಾರಿ ಹಮೀದ್ ಸುಲೈಮಾನ್, ಪಿಎಫ್‌ಐ ಪಡುಬಿದ್ರಿ ವಲಯದ ಅಧ್ಯಕ್ಷ ಹನೀಫ್ ಮೂಳೂರು, ಮುಖಂಡರಾದ ಝಮೀರ್ ಎರ್ಮಾಳ್, ಕಾರ್ಯಕರ್ತರು ಉಪಸ್ಥಿತರಿದ್ದರು. ಖಲೀಲ್ ಉಮರ್ ಸ್ವಾಗತಿಸಿ ಅಶ್ರಫ್ ಎರ್ಮಾಳ್ ವಂದಿಸಿದರು.