×
Ad

ಚೀನಾ ನೀತಿಯನ್ನು ಭಾರತ ಬದಲಿಸಬೇಕಾಗಿದೆ: ಮಾಜಿ ಸೇನಾ ವರಿಷ್ಠ ಮಲಿಕ್

Update: 2020-06-21 20:21 IST

 ಹೊಸದಿಲ್ಲಿ,ಜೂ.22: ಚೀನಾ ಹಾಗೂ ಪಾಕಿಸ್ತಾನದೊಂದಿಗೆ, ಎರಡೂ ಮುಂಚೂಣಿಗಳಲ್ಲಿ ಯುದ್ಧ ನಡೆಸುವ ಸಾಮರ್ಥ್ಯವನ್ನು ಭಾರತೀಯ ಸೇನೆ ಹೊಂದಿದೆ ಎಂದು ಭಾರತೀಯ ಸೇನಾಪಡೆಯ ಮಾಜಿ ವರಿಷ್ಠ ಜನರಲ್ ವಿ.ಪಿ.ಮಲಿಕ್ ತಿಳಿಸಿದ್ದಾರೆ.

ಹಿಂದಿ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ‘‘ನಾವು ಎರಡೂ ಮುಂಚೂಣಿ ಗಡಿಗಳಲ್ಲಿ ಸುಲಭವಾಗಿ ಕಾದಾಡಬಲ್ಲೆವು. ನಾವು ಹೆಚ್ಚೇನೂ ಆತಂಕ ಪಡಬೇಕಾಗಿಲ್ಲ. ನಮ್ಮ ಪಡೆಗಳಿಗೆ ಆ ಸಾಮರ್ಥ್ಯವಿದೆ’’ ಎಂದು ಜನರಲ್ ಮಲಿಕ್ ತಿಳಿಸಿದರು.

   ಗಲ್ವಾನ್ ಕಣಿವೆಯಲ್ಲಿ ಕಳೆದ ವಾರ ಚೀನಾ ಹಾಗೂ ಭಾರತದ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರ ಹುತಾತ್ಮರಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೂನ್ 15ರಂದು ನಡೆದ ಘಟನೆಯು ಒಂದು ಮಹತ್ತರ ತಿರುವು ಆಗಿದೆ. ಚೀನಾದ ಕುರಿತಾದ ತನ್ನ ನೀತಿಯನ್ನು ಭಾರತವು ಮಿಲಿಟರಿಯಲ್ಲಿ ಮಾತ್ರವಲ್ಲದೆ ಆರ್ಥಿಕ ಹಾಗೂ ರಾಜಕೀಯ ರಂಗಗಳಲ್ಲೂ ನೀತಿ ಬದಲಿಸಬೇಕಾಗಿದೆ’’ ಎಂದರು.

 ಚೀನಾದ ಜೊತೆ ಯುದ್ಧ ನಡೆಯುವ ಸಾಧ್ಯತೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಲಿಕ್, ‘‘ ಈಗ ನಾವು ಸಾಮರ್ಥ್ಯವನ್ನು ಹೊಂದಿದ್ದೇವೆ. ಒಂದು ವೇಳೆ ನಿಜವಾಗಿ ಅದು (ಸಮರ) ನಡೆದಲ್ಲಿ, ನಾವು ಕಾದಾಡಬಲ್ಲೆವು. ಕೆಲವು ಪ್ರದೇಶಗಳಲ್ಲಿ ನಾವು ಆಕ್ರಮಣಕಾರಿ ಕಾರ್ಯಾಚರಣೆಯನ್ನೂ ನಡೆಸಬಲ್ಲೆವು. ನಮ್ಮ ಬಳಿ ಆಯುಧಗಳು ಕಡಿಮೆಯಿರಬಹುದು. ಆದರೆ ನಮ್ಮ ಪಡೆಗಳು ದೇಶದ ಗಡಿಗಳನ್ನು ದಕ್ಷತೆಯಿಂದ ಕಾಪಾಡಬಲ್ಲವು ’’ ಎಂದು ಭರವಸೆ ವ್ಯಕ್ತಪಡಿಸಿದರು.

ಭಾರತೀಯ ಸೇನೆಯ ನೈಪುಣ್ಯತೆ,ದೃಢನಿರ್ಧಾರ ಹಾಗೂ ಪರ್ವತಸಮರ ಕಲೆಯಲ್ಲಿ ಪರಿಣತಿಯು ಚೀನಿ ಸೇನೆಗಿಂತ ಉತ್ತಮವಾಗಿದೆ’

ಜ.ವಿ.ಪಿ.ಮಲಿಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News