ಕಾಪು: ಕುಸಿದು ಬಿದ್ದು ಟೆಂಪೋ ಚಾಲಕ ಮೃತ್ಯು
Update: 2020-06-21 22:16 IST
ಕಾಪು, ಜೂ.21: ಟೆಂಪೋ ಚಾಲಕರೊಬ್ಬರು ಬಾಡಿಗೆ ತೆರಳಿದ್ದ ಕಟಪಾಡಿ ಸಮೀಪದ ಮಣಿಪುರ ಎಂಬಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಜೂ.20 ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಏಣಗುಡ್ಡೆ ಗ್ರಾಮದ ಜೆ.ಎನ್.ನಗರದ ರಾಜ ಶ್ರೀಯಾನ್(50) ಎಂದು ಗುರುತಿಸಲಾಗಿದೆ. ಬಿ.ಪಿ. ಮತ್ತು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಇವರು, ಬಾಡಿಗೆ ತೆರಳಿದ್ದಲ್ಲಿ ಟೆಂಪೋವನ್ನು ನಿಲ್ಲಿಸಿ ಅಲ್ಲೇ ಸಮೀಪ ನಿಂತು ಕೊಂಡಿರುವಾಗ ಕುಸಿದು ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದರು. ಬಳಿಕ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.