ಬಂಟ್ವಾಳ: ಕೋಳಿ ಅಂಕಕ್ಕೆ ದಾಳಿ; ಆರು ಮಂದಿ ಪೊಲೀಸ್ ವಶಕ್ಕೆ
Update: 2020-06-21 22:51 IST
ಬಂಟ್ವಾಳ, ಜೂ.21: ಕೋಳಿ ಅಂಕ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಗ್ರಾಮಾಂತರ ಪೊಲೀಸರು ಕೋಳಿ, ನಗದು ಸಹಿತ ಕೋಳಿ ಅಂಕದಲ್ಲಿ ಭಾಗವಹಸಿದ್ದವರನ್ನು ವಶಕ್ಕೆ ಪಡೆದುಕೊಂಡ ಘಟನೆ ಪೊಳಲಿಯ ಪಡ್ಯಾಪು ಎಂಬಲ್ಲಿ ನಡೆದಿದೆ.
ಪೊಳಲಿ ಸಮೀಪದ ಪಡ್ಯಾಪು ಸ್ಮಶಾನದ ಗುಡ್ಡೆಯೊಂದರಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಗ್ರಾಮಾಂತರ ಪೊಲೀಸರು ಸ್ಥಳದಲ್ಲಿದ್ದ ಸುಮಾರು 4,800 ರೂ. ಮೌಲ್ಯದ 12 ಕೋಳಿ, ಆರು ಮಂದಿ ಆರೋಪಿಗಳು ಹಾಗೂ 2,800 ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ದಾಳಿಯ ವೇಳೆ ವಶಪಡಿಸಿಕೊಂಡ ಕೋಳಿಗಳನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಏಲಂ ಮಾಡಲಾಯಿತು.