ಇಂಡೋನೇಶ್ಯದಲ್ಲಿ ಜ್ವಾಲಾಮುಖಿ ಸ್ಫೋಟ: 6 ಕಿ.ಮೀ. ಎತ್ತರಕ್ಕೆ ದಟ್ಟ ಹೊಗೆ

Update: 2020-06-21 17:50 GMT

ಜಕಾರ್ತ (ಇಂಡೊನೇಶ್ಯ), ಜೂ. 21: ಜಗತ್ತಿನ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳ ಪೈಕಿ ಒಂದಾದ ಇಂಡೋನೇಶ್ಯದ ಮೌಂಟ್ ಮೆರಪಿ ಜ್ವಾಲಾಮುಖಿ ಪರ್ವತ ರವಿವಾರ ಎರಡು ಬಾರಿ ಸ್ಫೋಟಿಸಿದೆ. ಈ ಸಂದರ್ಭದಲ್ಲಿ ಸುಮಾರು 6,000 ಮೀಟರ್ ಎತ್ತರಕ್ಕೆ ದಟ್ಟ ಹೊಗೆ ಚಿಮ್ಮುತ್ತಿದೆ.

ಸುಮಾರು 7 ನಿಮಿಷಗಳ ಕಾಲ ಎರಡು ಸ್ಫೋಟಗಳು ಸಕ್ರಿಯವಾಗಿದ್ದವು ಎಂದು ದೇಶದ ಹವಾಮಾನ ಸಂಸ್ಥೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಇಂಡೋನೇಶ್ಯದ ಸಾಂಸ್ಕತಿಕ ರಾಜಧಾನಿ ಯೋಗ್ಯಕರ್ತದ ಸಮೀಪದಲ್ಲಿರುವ ಜ್ವಾಲಾಮುಖಿಯ ತಳದಿಂದ ಮೂರು ಕಿಲೋಮೀಟರ್ ಹೊರಗೆ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲಾಯಿತು.

ಜ್ವಾಲಾಮುಖಿಯ ಬಗ್ಗೆ ಹವಾಮಾನ ಸಂಸ್ಥೆ ಎಚ್ಚರಿಕೆಯನ್ನು ಹೊರಡಿಸಿಲ್ಲ. ಆದರೆ, ಎಚ್ಚರಿಕೆಯಿಂದಿರುವಂತೆ ವಾಣಿಜ್ಯ ವಿಮಾನಗಳಿಗೆ ಸಲಹೆ ನೀಡಿದೆ.

ಇಲ್ಲಿ 2010ರಲ್ಲಿ ಸಂಭವಿಸಿದ ಸ್ಫೋಟದಲ್ಲಿ 300ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 2,80 ಲಕ್ಷ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News