×
Ad

ಮೂರುಗೋಳಿ: ಎಸ್ಸೆಸ್ಸೆಫ್‌ನಿಂದ ರಕ್ತದಾನ ಶಿಬಿರ

Update: 2020-06-21 23:44 IST

ಬೆಳ್ತಂಗಡಿ, ಜೂ.21: ಎಸ್ಸೆಸ್ಸೆಫ್ ಮೂರುಗೋಳಿ ಸೆಕ್ಟರ್ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ದ.ಕ. ಜಿಲ್ಲಾ ಬ್ಲಡ್ ಸ್ಯೆಬೋ ಇದರ 155ನೇ ರಕ್ತದಾನ ಶಿಬಿರವು ರವಿವಾರ ಮೂರುಗೋಳಿ ಸಭಾ ಭವನದಲ್ಲಿ ನಡೆಯಿತು.

ಸ್ಥಳೀಯ ಖತೀಬ್ ಅಥಾವುಲ್ಲ ಹಿಮಮಿ ಸಖಾಫಿ ಕುಪ್ಪೆಟ್ಟಿ ಶಿಬಿರವನ್ನು ಉದ್ಘಾಟಿಸಿದರು. ಸೆಕ್ಟರ್ ಅಧ್ಯಕ್ಷ ಎ.ಕೆ.ಇಬ್ರಾಹೀಂ ಸಅದಿ ಕಳಂಜಿಬೈಲು ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಬ್ಲಡ್ ಸೈಬೊ ಉಸ್ತುವಾರಿ ಕರೀಂ ಕದ್ಕಾರ್ ಮತ್ತು ರೆಡ್‌ಕ್ರಾಸ್ ಸೊಸೈಟಿ ಇದರ ಉಸ್ತುವಾರಿ ಪ್ರವೀಣ್, ಜಿಲ್ಲಾ ಕೋಶಾಧಿಕಾರಿ ಮುಹಮ್ಮದಲಿ ತುರ್ಕಳಿಕೆ, ದ.ಕ. ಈಸ್ಟ್ ರೆನ್ ಬ್ಲಡ್ ಸೈಬೊ ಉಸ್ತುವಾರಿ ಇಮ್ರಾನ್ ರೆಂಜಳಾಡಿ, ಉಪ್ಪಿನಂಗಡಿ ಡಿವಿಶನ್ ಬ್ಲಡ್ ಸೈಬೋ ಉಸ್ತವಾರಿ ಇಸ್ಹಾಕ್ ಮದನಿ ಅಳಕೆ, ಡಿವಿಷನ್ ಅಧ್ಯಕ್ಷ ಮುಹಮ್ಮದ್ ಮಿಸ್ಬಾಹಿ ಕಡಬ, ಪ್ರ.ಕಾರ್ಯದರ್ಶಿ ಮುಸ್ತಫ ಉರುವಾಲುಪದವು, ಕೋಶಾಧಿಕಾರಿ ಲತೀಫ್ ಕನ್ಯಾರಕೋಡಿ, ಡಿವಿಷನ್ ಮಾಜಿ ಅಧ್ಯಕ್ಷ ಮಸೂದ್ ಸಅದಿ, ಸೆಕ್ಟರ್ ಬ್ಲಡ್ ಸೈಬೊ ಉಸ್ತುವಾರಿ ಸಿಹಾಬ್ ಜೆ.ಕೆ. ಕಕ್ಕೆಪದವು ಮತ್ತಿತರರು ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 125 ಯೂನಿಟ್ ರಕ್ತ ಸಂಗ್ರಹವಾಗಿದೆ.ಜುನೈದ್ ತುರ್ಕಳಿಕೆ ಸ್ವಾಗತಿಸಿದರು. ಪಿರೋಝ್ ಮುಈನಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News