ಮರ್ದಾಳ: ಎರಡು ಬೈಕ್‌ಗಳ ನಡುವೆ ಅಪಘಾತ; ಇಬ್ಬರಿಗೆ ಗಂಭೀರ ಗಾಯ
Update: 2020-06-22 10:01 IST
ಕಡಬ, ಜೂ.22: ಎರಡು ಬೈಕ್‌ಗಳ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪ ಸೋಮವಾರ ಬೆಳಗ್ಗೆ ನಡೆದಿದೆ.
ಕಡಬ ತಾಲೂಕು ಬಂಟ್ರ ಗ್ರಾಮದ ಪಣೆಬೈಲು ನಿವಾಸಿ ಯತೀಂದ್ರ ರೈ ಎಂಬವರ ಪುತ್ರ ಪ್ರಮೋದ್ ಹಾಗೂ ರೆಂಜಿಲಾಡಿ ಗ್ರಾಮದ ಖಂಡಿಗ ನಿವಾಸಿ ಗಣೇಶ್ ಗಾಯಗೊಂಡವರಾಗಿದ್ದಾರೆ.
ಗಾಯಾಳುಗಳನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.