ಮಂಚಿ ಎಸ್ಸೆಸ್ಸಫ್ ನಿಂದ ಸರಕಾರಿ ಪ್ರೌಢಶಾಲೆ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ
ವಿಟ್ಲ, ಜೂ.22: ಎಸೆಸೆಲ್ಸಿ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಮಂಚಿ ಸರಕಾರಿ ಪ್ರೌಢಶಾಲೆ ವಠಾರದಲ್ಲಿ ಎಸ್ಸೆಸ್ಸಫ್ ಮಂಚಿ ಸೆಕ್ಟರ್ ವತಿಯಿಂದ ರವಿವಾರ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು.
ಸೆಕ್ಟರ್ ಅಧ್ಯಕ್ಷ ಝುಬೈರ್ ಸಂಪಿಲ ನೇತೃತ್ವ ವಹಿಸಿದ್ದರು. ಸುನ್ನೀ ಮಹಲ್ ಅಧ್ಯಕ್ಷ ಶೈಖುನಾ ಎಣ್ಮೂರು ಉಸ್ತಾದ್ ದುಆಗೈದರು.
ಎಸ್.ವೈ.ಎಸ್ ಮಂಚಿ ಬ್ರಾಂಚ್ ಅಧ್ಯಕ್ಷ ಬದ್ರುದ್ದೀನ್ ಹಾಜಿ ಮಂಚಿ ಉದ್ಘಾಟಿಸಿದರು.
ಎಸ್ಸೆಸ್ಸೆಫ್ ದ.ಕ. ವೆಸ್ಟ್ ಝೋನ್ ಕೋಶಾಧಿಕಾರಿ ಝೈನುಲ್ ಆಬಿದ್ ನಈಮಿ, ಬಂಟ್ವಾಳ ಡಿವಿಷನ್ ಕೋಶಾಧಿಕಾರಿ ಅಸ್ಲಂ ಸಂಪಿಲ, ಡಿವಿಷನ್ ಉಪಾಧ್ಯಕ್ಷ ಹಂಝ ಮಂಚಿ, ಮಂಚಿ ಸೆಕ್ಟರ್ ಉಸ್ತುವಾರಿ ಇಬ್ರಾಹೀಂ ಸುರಿಬೈಲ್, ಮಂಚಿ ಸೆಕ್ಟರ್ ಕೋಶಾಧಿಕಾರಿ ಜಾಬಿರ್ ಪಡ್ಪು, ಸುನ್ನೀ ಮಹಲ್ ಮುದರ್ರಿಸ್ ಸಾಲಿಂ ಸಅದಿ, ಎಸ್.ವೈ.ಎಸ್. ಮಂಚಿ ಬ್ರಾಂಚ್ ಸದಸ್ಯರಾದ ಮುಹಮ್ಮದ್ ಮಂಚಿ, ಮಂಚಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಇಬ್ರಾಹೀಂ ಮಂಚಿ ಮೊದಲಾದವರು ಉಪಸ್ಥಿತರಿದ್ದರು.
ಸೆಕ್ಟರ್ ಕಾರ್ಯದರ್ಶಿ ಲುಕುಮಾನ್ ಕುಕ್ಕಾಜೆ ಸ್ವಾಗತಿಸಿದರು. ಸೆಕ್ಟರ್ ಕಾರ್ಯದರ್ಶಿ ನೌಫಲ್ ಕಟ್ಟತ್ತಿಲ ವಂದಿಸಿದರು.