ಅವ್ಯವಹಾರದ ಆರೋಪ: ಕಲ್ಮಂಜ ಗ್ರಾಪಂನಲ್ಲಿ ಎಸಿಬಿ ಅಧಿಕಾರಿಗಳಿಂದ ತನಿಖೆ

Update: 2020-06-22 10:16 GMT

ಬೆಳ್ತಂಗಡಿ, ಜೂ.22: ಕಲ್ಮಂಜ ಗ್ರಾ.ಪಂ ತಾತ್ಕಾಲಿಕ ಡಾಟಾ ಎಂಟ್ರಿ ಅಪರೇಟರ್ ರಿಂದ ಅವ್ಯವಹಾರವಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಎಸಿಬಿ ಪೊಲೀಸರು ಜೂ.22ರಂದು ಪಂಚಾಯತ್ ಗೆ ಆಗಮಿಸಿ ತನಿಖೆ ನಡೆಸಿದ್ದಾರೆ.

ಯಾವುದೇ ಮನೆಯನ್ನು ತನ್ನ ಹೆಸರಿನಲ್ಲಿ ಹೊಂದಿರದೆ 94ಸಿ ಯಲ್ಲಿ ಹಕ್ಕು ಪತ್ರ ಪಡೆದುಕೊಂಡಿದ್ದಾರೆ. ಒಂದೇ ಮನೆಯಲ್ಲಿ ವಾಸಿಸುವ ಅವರ ಕುಟುಂಬಕ್ಕೆ 4_5 ವರ್ಷದ ಒಳಗೆ ಪಂಚಾಯತ್ ವಸತಿ ಯೋಜನೆಯ 2 ಮನೆ ಮಂಜೂರಾಗಿದೆ. ಅವರು ವಾಸಿಸುತ್ತಿರುವ ಮನೆ ಅವರ ಅತ್ತಿಗೆಗೆ ವಸತಿ ಯೋಜನೆಯಲ್ಲಿ ಮಂಜೂರಾದ ಮನೆಯಾಗಿದ್ದು, ಅದರ ವಿದ್ಯುತ್ ಸಂಪರ್ಕ ಕಲ್ಮಂಜ ಗ್ರಾಪಂ ತಾತ್ಕಾಲಿಕ ಡಾಟಾ ಎಂಟ್ರಿ ಅಪರೇಟರ್ ರಮೇಶ್ ಅವರ ಹೆಸರಿನಲ್ಲಿದೆ. ಅವರ ಕುಟುಂಬ ಒಂದೇ ಮನೆಯಲ್ಲಿದ್ದು, ಹಲವಾರು ಡೋರ್ ನಂಬ್ರ ಹೊಂದಿರುವ ಬಗ್ಗೆ ಸಂಶಯವಿದೆ ಎಂದು ಸಚಿನ್ ಕುಮಾರ್ ಎಂಬವರು ಆರೋಪ ಹೊರಿಸಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News