‘ಗರ್ಭಿಣಿಯಾಗಿದ್ದಾರೆ ಎನ್ನುವುದು ಅಪರಾಧದ ಗಂಭೀರತೆಯನ್ನು ಕಡಿಮೆಗೊಳಿಸುವುದಿಲ್ಲ'

Update: 2020-06-22 12:04 GMT

ಹೊಸದಿಲ್ಲಿ:  ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ ಹಿಂಸಾಚಾರ ಸಂಬಂಧ ಪ್ರಕರಣ ಎದುರಿಸುತ್ತಿರುವ ಸಿಎಎ ವಿರೋಧಿ ಹೋರಾಟಗಾರ್ತಿ ಸಫೂರ ಝರ್ಗರ್ ರ ಜಾಮೀನು ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ನಲ್ಲಿ ವಿರೋಧಿಸಿರುವ ದಿಲ್ಲಿ ಪೊಲೀಸರು ಗರ್ಭಿಣಿಯಾಗಿದ್ದಾರೆ ಎನ್ನುವುದು ಆಕೆ ಮಾಡಿದ್ದಾರೆನ್ನಲಾದ ಅಪರಾಧದ ಗಂಭೀರತೆಯನ್ನು ಕಡಿಮೆಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.

ಎಪ್ರಿಲ್ 10ರಂದು ಬಂಧಿಸಲ್ಪಟ್ಟ ಸಫೂರ ವಿರುದ್ಧ ಕಠಿಣ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಹೇರಲಾಗಿದೆ. ಜಾಮಿಯಾ ಮಿಲ್ಲಿಯಾ ವಿವಿಯ ಎಂಫಿಲ್ ವಿದ್ಯಾರ್ಥಿನಿಯಾಗಿದ್ದಾರೆ ಸಫೂರ.

ಆಕೆ ಗರ್ಭಿಣಿಯಾಗಿದ್ದಾಳೆಂಬ ಆಧಾರದಲ್ಲಿ ಜಾಮೀನು ನೀಡಬೇಕೆಂಬ ಅರ್ಜಿಯನ್ನು ಪೊಲೀಸರು ರವಿವಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಪಿಡವಿಟ್‍ನಲ್ಲಿ ವಿರೋಧಿಸಿದ್ದಾರಲ್ಲದೆ , ಕಳೆದ ಹತ್ತು ವರ್ಷಗಳಲ್ಲಿ 39 ಹೆರಿಗೆಗಳನ್ನು ನಡೆಸಲಾಗಿರುವ ತಿಹಾರ್ ಜೈಲಿ‍ನಲ್ಲಿ ಆಕೆಗೆ ಸಾಕಷ್ಟು ವೈದ್ಯಕೀಯ ಆರೈಕೆ ದೊರಕುತ್ತಿದೆ ಎಂದು ಹೇಳಿದ್ದಾರೆ.

ಗರ್ಭಿಣಿಯಾಗಿರುವಂತಹ ಸಮಯದಲ್ಲಿ ಆಕೆ ತಮ್ಮ ಚಟುವಟಿಕೆಗಳನ್ನು ನಿಯಂತ್ರಿಸಬೇಕಿತ್ತು ಎಂದು ದಿಲ್ಲಿ ಪೊಲೀಸರ ವಿಶೇಷ ಸೆಲ್ ಡಿಸಿಪಿ ಪಿ ಎಸ್ ಖುಶ್ವಾಹ ಅವರ ಸಹಿಯಿರುವ ಅಫಿಡವಿಟ್ ‍ನಲ್ಲಿ ಹೇಳಲಾಗಿದೆ.

ಗಂಭೀರ ಅಪರಾಧ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟಿರುವ  ಮಹಿಳೆಯರು ಗರ್ಭಿಣಿಯಾಗಿದ್ದಾರೆಂಬ ಕಾರಣಕ್ಕೆ ಈ ಹಿಂದೆ ಜಾಮೀನು ನೀಡಿದ ಉದಾಹರಣೆಯಿಲ್ಲ ಎಂದೂ ಪೊಲೀಸರ ಅಫಿಡವಿಟ್‍ ನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News