ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ಯೋಗ ದಿನಾಚರಣೆ
ಉಡುಪಿ, ಜೂ.22: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸ್ವಸ್ಥ ವೃತ್ತ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಜೂ.20ರಂದು ವಿವಿಧ ಕಾರ್ಯಕ್ರಮ ಗಳು ಅಂತರ್ಜಾಲ ಮಾಧ್ಯಮದ ಮೂಲಕ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಗುಜರಾತ್ ನಿಂಬ ನೇಚರ್‌ಕ್ಯೂರ್ ವಿಲೇಜ್‌ನ ವೈದ್ಯಕೀಯ ಅಧೀಕ್ಷಕ ಡಾ.ಶ್ಯಾಮರಾಜ್ ನಿಡುಗಳ, ಜೀವನ ಶೈಲಿ ಮತ್ತು ಅಸ್ವಸ್ಥತೆಯ ನಿರ್ವಹಣೆಯಲ್ಲಿ ಯೋಗದ ಪ್ರಾಮುಖ್ಯತೆ ಕುರಿತು ವೆಬಿನಾರ್ ಮೂಲಕ ಉಪನ್ಯಾಸ ನೀಡಿದರು.
ಯೋಗ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಯೋಗ, ಕುಟುಂಬದವರೊಂದಿಗೆ ಯೋಗ ಎಂಬ ಈ ವರ್ಷದ ವಿಷಯದ ಕುರಿತು ವೀಡಿಯೋ ಹಾಗೂ ಅಂತರ್ಜಾಲ ಭಿತ್ತಿಪತ್ರ ಸ್ಪರ್ಧೆ ಏರ್ಪಡಿಸಲಾಯಿತು. ಸ್ವಸ್ಥವೃತ್ತ ವಿಭಾಗದ ುುಖ್ಯಸ್ಥ ಡಾ.ವಿಜಯ್ ಬಿ.ನೆಗಳೂರು, ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ವಿದ್ಯಾಲಕ್ಷ್ಮೀ ಕೆ., ಸ್ವಸ್ಥ ವೃತ್ತ ವಿಭಾಗದ ಸಹೋದ್ಯೋಗಿ ಗಳಾದ ಡಾ.ಯೋಗೀಶ ಆಚಾರ್ಯ, ಡಾ.ಶ್ರೀನಿಧಿ ಧನ್ಯ, ಡಾ.ಕೃತಿ ಅಮೈ ಉಪಸ್ಥಿತರಿದ್ದರು. ಸ್ವಸ್ಥವೃತ್ತ ವಿಭಾಗದ ಸಹಪ್ರಾಧ್ಯಾಪಕ ಡಾ.ಸಂದೇಶಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.