ಉಡುಪಿ: ಗಾಳಿ-ಮಳೆಗೆ ಮೂರು ಮನೆಗಳಿಗೆ ಹಾನಿ
Update: 2020-06-22 18:09 IST
ಉಡುಪಿ, ಜೂ.22: ರವಿವಾರ ಬೀಸಿದ ಗಾಳಿ-ಮಳೆಗೆ ಬ್ರಹ್ಮಾವರ ತಾಲೂಕಿನ ಮೂರು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಹಾವಂಜೆ ಗ್ರಾಮದ ಸಂಜೀವ ಶೆಟ್ಟಿ ಅವರ ಪಕ್ಕಾ ಮನೆಗೆ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿದ್ದು 20ಕ್ಕೂ ಅಧಿಕ ನಷ್ಟ ಉಂಟಾದ ಬಗ್ಗೆ ವರದಿಯಾಗಿದೆ.
ನೀಲಾವರ ಗ್ರಾಮದ ಸಂಜೀವ ನಾಯಕ್ ಎಂಬವರ ಪಕ್ಕಾ ಮನೆ ಹಾಗೂ ವಾರಂಬಳ್ಳಿ ಗ್ರಾಮದ ಗೋಪಾಲಕೃಷ್ಣ ಪೈ ಅವರ ಮನೆಗೂ ಭಾಗಶ: ಹಾನಿಯಾಗಿದ್ದು, ಕ್ರಮವಾಗಿ 20 ಸಾವಿರ ಹಾಗೂ 25ಸಾವಿರ ರೂ.ಗಳಷ್ಟು ಹಾನಿಯಾಗಿದೆ ಎಂದು ಬ್ರಹ್ಮಾವರ ತಾಲೂಕು ಕಚೇರಿಯಿಂದ ತಿಳಿದುಬಂದಿದೆ.
ಸೋಮವಾರ ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 35.67ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 25ಮಿ.ಮೀ., ಕುಂದಾಪುರದಲ್ಲಿ 26 ಹಾಗೂ ಕಾರ್ಕಳದಲ್ಲಿ 56ಮಿ.ಮೀ ುಳೆಯಾದ ಬಗ್ಗೆ ವರದಿಗಳು ತಿಳಿಸಿವೆ.