×
Ad

ಹಿರಿಯಡ್ಕ: ಭತ್ತದ ಚಾಪೆ ನೇಜಿ ತಾಕಿಗೆ ಕೃಷಿ ವಿಜ್ಞಾನಿಗಳ ಭೇಟಿ

Update: 2020-06-22 18:15 IST

ಉಡುಪಿ, ಜೂ.22: ಭತ್ತದ ಚಾಪೆ ನೇಜಿ ತಾಕಿಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡವು ಹಿರಿಯಡ್ಕದ ಬೊಮ್ಮರಬೆಟ್ಟು ವಿನಲ್ಲಿರುವ ಸುರೇಶ್ ನಾಯಕ್ ಇವರ ತಾಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಪ್ರಗತಿಪರ ಕೃಷಿಕರಾಗಿರುವ ಸುರೇಶ್ ನಾಯಕ್ ಕಳೆದ 13 ವಷರ್ಗಳಿಂದ ಕೃಷಿ ವಿಜ್ಞಾನ ಕೇಂದ್ರದ ನಿಕಟ ಸಂಪರ್ಕ ಹೊಂದಿದ್ದು, ಪ್ರಸ್ತುತ ವಷರ್ದಲ್ಲಿ ಸುಮಾರು 1000 ಎಕರೆ ಪ್ರದೇಶಕ್ಕೆ ಬೇಕಾಗುವ ಚಾಪೆ ನೇಜಿಯನ್ನು ತಯಾರಿಸಿ ರೈತರ ಬೇಡಿಕೆ ಆಧಾರದ ಮೇಲೆ ಸರಬರಾಜು ಮಾಡುತ್ತಿದ್ದಾರೆ.

ಆರಂಭದಲ್ಲಿ ಸುರೇಶ್ ನಾಯಕ್ ಅವರು ಕೃಷಿಯಲ್ಲಿ ನಾಟಿ ಯಂತ್ರದ ಬಳಕೆ ಹಾಗೂ ಚಾಪೆ ನೇಜಿಯ ಬಗ್ಗೆ ತದ್ವಿರುದ್ಧವಾದ ಅಭಿಪ್ರಾಯವನ್ನು ಹೊಂದಿದ್ದು, ಈ ನೇಜಿಯನ್ನು ಜಿಲ್ಲೆಯ ರೈತರು ಮಾಡಲು ಸಾಧ್ಯವೇ ಇಲ್ಲ, ಇವು ನಮ್ಮ ಪ್ರದೇಶದ ಗದ್ದೆಗಳಿಗೆ ಹೊಂದಿಕೆಯಾಗುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ತದ್ವಿರುದ್ಧವಾದ ಅಭಿಪ್ರಾಯವನ್ನುಹೊಂದಿದ್ದು, ಈ ನೇಜಿಯನ್ನು ಜಿಲ್ಲೆಯ ರೈತರು ಮಾಡಲು ಸ್ಯಾಧ್ಯವೇ ಇಲ್ಲ, ಇವು ನಮ್ಮ ಪ್ರದೇಶದ ಗದ್ದೆಗಳಿಗೆ ಹೊಂದಿಕೆಯಾಗುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಬಿದ್ಕಲ್‌ಕಟ್ಟೆ ಸಮೀಪದ ಗಾವಳಿ ಗ್ರಾಮದ ಪಾಂಡುರಂಗ ಕಿಣಿ ಅವರು 2007ರಲ್ಲಿ ಇವುಗಳನ್ನು ಪ್ರಾರಂಭಿಸಿದಾಗ ಅದರ ಯಶಸ್ಸನ್ನು ಸ್ವತಹ ಕಂಡ ಸುರೇಶ್ ನಾಯಕ್, ಯಂತ್ರ ನಾಟಿ ಹಾಗೂ ಚಾಪೆ ನೇಜಿ ತಯಾರಿಸಲು ಮುಂದಾದರು. ಇದಕ್ಕಾಗಿ ಅವರು ಬ್ರಹ್ಮಾವರ ಕೆ.ವಿ.ಕೆಯ ವಿಜ್ಞಾನಿಗಳ ನೆರವನ್ನು ಪಡೆದಿದ್ದರು.

ಇದರಿಂದ ಸುರೇಶ್ ನಾಯಕ್ ಪ್ರಸ್ತುತ ವರ್ಷದಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಯಂತ್ರದಿಂದ ನಾಟಿ ಮಾಡಲು ಮುಂದಾಗಿದ್ದಾರೆ. ಇವರು ಸುಮಾರು 2.2 ಎಕರೆ ಖಾಲಿ ಜಾಗದಲ್ಲಿ ಟ್ರೇ ವಿಧಾನದಲ್ಲಿ ಚಾಪೆ ನೇಜಿ ತಯಾರಿಸಿದ್ದಾರೆ ಮತ್ತು ರೈತರಿಗೆ ನಾಟಿಯನ್ನು ಬಾಡಿಗೆ ಆಧಾರದಲ್ಲಿ ಮಾಡಿಕೊಡುತ್ತಿದ್ದಾರೆ.

2001ರಲ್ಲಿ ನಾಟಿ ಯಂತ್ರ, ಕಟಾವು ಯಂತ್ರಗಳನ್ನು ಬೇರೆ ರಾಜ್ಯಗಳಿಂದ ತರಿಸುತಿದ್ದ ನಾಯಕ್, ಇಂದು ಉಡುಪಿ ಜಿಲ್ಲೆಯ ರೈತರಿಗೆ ಭತ್ತ ನಾಟಿಯಿಂದ ಹಿಡಿದು ಕಟಾವಿನವರೆಗೆ ಬೇಕಾದ ಎಲ್ಲಾ ಯಂತ್ರೋಪಕರಣಗಳನ್ನು ನೀಡಲು ಮುಂದಾಗಿದ್ದಾರೆ. ಇವರ ಈ ಉದ್ಯಮಶೀಲತೆ ಇತರೆ ಯುವಕರಿಗೆ ಮತ್ತು ರೈತರಿಗೆ ಮಾದರಿಯಾಗಿದೆ ಎಂದು ಕೃಷಿ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಸ್ತುತ ಇವರು ಹಿರಿಯಡ್ಕದ ಬಳಿ ಇರುವ ಬೊಮ್ಮರಬೆಟ್ಟು ಪ್ರದೇಶದಲ್ಲಿ ಪ್ರತಿ ಚಾಪೆ ನೇಜಿ ಮ್ಯಾಟ್‌ಗೆ 40ರೂ.ನಂತೆ ಮುಂಗಡ ನೊಂದಣಿ ಆಧಾರದ ಮೇಲೆ ಮಾರಾಟ ಮಾಡುತ್ತಿದ್ದಾರೆ. ಯಂತ್ರ ನಾಟಿ ಚಾಪೆ ನೇಜಿಯು ಸೇರಿ ಪ್ರತಿ ಎಕರೆಗೆ 6,000ರೂ. ಇದರಲ್ಲಿ ನೇಜಿ ಸಾಗಾಟ ವೆಚ್ಚವನ್ನು ಆಯಾ ರೈತರೇ ಭರಿಸಬೇಕಾಗುತ್ತದೆ ಎಂದು ಕ್ಷೇತ್ರ ಭೇಟಿಯ ಸಂದಭದರ್ಲ್ಲಿ ಸುರೇಶ್ ನಾಯಕ್ ತಿಳಿಸಿದರು.

ಸುರೇಶ್ ನಾಯಕ್, ರಾಜ್ಯ ಕೃಷಿ ಮತ್ತು ತೋಟಗಾರಿಕೆ ವಿಶ್ವದ್ಯಾನಿಲಯದ ಉಪಕುಲಪತಿ ಡಾ. ಮಂಜುನಾಥ್ ನಾಯಕ್ ಮತ್ತು ವಿಸ್ತರಣಾಧಿಕಾರಿ ಡಾ. ಶಶಿಧರ್ ಇವರ ನಿಕಟ ಸಂಪರ್ಕದಲ್ಲಿದ್ದು, ಅವರಿಂದಲೂ ಯಾಂತ್ರಿಕೃತ ಭತ್ತದ ಬೇಸಾಯದ ಬ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಮುಖ್ಯಸ್ಥ ಡಾ. ಬಿ. ಧನಂಜಯ, ತೋಟಗಾರಿಕಾ ವಿಜ್ಞಾನಿ ಎಚ್.ಎಸ್. ಚೈತನ್ಯ, ಬೇಸಾಯ ಶಾಸ್ತ್ರ ತಜ್ಞರಾದ ಡಾ.ಎನ್.ಇ ನವೀನ್ ಇವರು ಚಾಪೆ ನೇಜಿ ಕ್ಷೇತ್ರಕ್ಕೆ ಭೇಟಿ ನೀಡಿದವರಲ್ಲಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News