ಪುರಿ ರಥಯಾತ್ರೆ: ನಿರ್ಧಾರವನ್ನು ಒಡಿಶಾ ಸರಕಾರಕ್ಕೆ ಬಿಟ್ಟ ಸುಪ್ರೀಂ

Update: 2020-06-22 15:16 GMT

  ಹೊಸದಿಲ್ಲಿ,ಜೂ.22: ಒಡಿಶಾ ಸರಕಾರವು ಪುರಿಯ ಪ್ರಸಿದ್ಧ ಜಗನ್ನಾಥ ಯಾತ್ರೆಯನ್ನು ನಡೆಸುವ ಬಗ್ಗೆ ನಿರ್ಧಾರವೊಂದನ್ನು ತೆಗೆದುಕೊಳ್ಳಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಹೇಳಿದೆ.

ಈ ವರ್ಷದ ರಥಯಾತ್ರೆಯನ್ನು ನಿಷೇಧಿಸಿದ್ದ ತನ್ನ ಮೊದಲಿನ ಆದೇಶವನ್ನು ಹಿಂದೆಗೆದುಕೊಳ್ಳುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ರಾಜ್ಯ ಸರಕಾರವು ಪರಿಸ್ಥಿತಿಯನ್ನು ಅವಲೋಕಿಸಲಿದೆ ಮತ್ತು ಅಗತ್ಯವಾದರೆ ಉತ್ಸವಗಳನ್ನು ನಿರ್ಬಂಧಿಸಲು ಕ್ರಮಗಳನ್ನು ಕೈಗೊಳ್ಳಲಿದೆ ಎಂದು ನ್ಯಾಯಾಲಯವು ತಿಳಿಸಿತು. ಏಳು ದಿನಗಳ ವಾರ್ಷಿಕ ಉತ್ಸವ ನಿಗದಿಯಂತೆ ಮಂಗಳವಾರದಿಂದ ಆರಂಭಗೊಳ್ಳಬೇಕಿದೆ.

 ಕೊರೋನ ವೈರಸ್ ಹರಡದಂತೆ ನೋಡಿಕೊಳ್ಳಲು ಒಂದು ದಿನದ ಕರ್ಫ್ಯೂ ಹೇರಲು ತಾನು ಸಿದ್ಧ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದ ಕೇಂದ್ರವು, ಜಗನ್ನಾಥ ರಥಯಾತ್ರೆಯು ಕೋಟ್ಯಂತರ ಜನರ ಶ್ರದ್ಧೆಯ ವಿಷಯವಾಗಿದೆ ಮತ್ತು ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿರುವ ಆಚರಣೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನಿವೇದಿಸಿಕೊಂಡಿತ್ತು.

ಕೊರೋನ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದವರು ಮತ್ತು ಜಗನ್ನಾಥ ದೇವಳದ ಸಿಬ್ಬಂದಿಗಳು ಮಾತ್ರ ಉತ್ಸವದಲ್ಲಿ ಭಾಗವಹಿಸಬಹುದು. ಸಂಪ್ರದಾಯಗಳಂತೆ ಜಗನ್ನಾಥ ದೇವರು ಮಂಗಳವಾರ ದೇವಳದಿಂದ ಹೊರಗೆ ಬರದಿದ್ದರೆ ಇನ್ನು 12 ವರ್ಷಗಳ ಕಾಲ ಹೊರಬರಲು ಸಾಧ್ಯವಿಲ್ಲ ಎಂದು ಕೇಂದ್ರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News