ಅಜ್ಜಿನಡ್ಕ: ಎಸ್‌ಡಿಪಿಐ ಸ್ಥಾಪನಾ ದಿನಾಚರಣೆ
Update: 2020-06-22 22:26 IST
ಮಂಗಳೂರು, ಜೂ.22: ಎಸ್‌ಡಿಪಿಐ ಪಕ್ಷದ ಅಜ್ಜಿನಡ್ಕ ಘಟಕದ ವತಿಯಿಂದ ಸ್ಥಾಪನಾ ದಿನವನ್ನು ರವಿವಾರ ಅಜ್ಜಿನಡ್ಕ ಜಂಕ್ಷನ್‌ನಲ್ಲಿ ಆಚರಿಸಲಾಯಿತು. ಈ ಸಂದರ್ಭ ಅಜ್ಜಿನಡ್ಕ ಹಿದಾಯತ್ ನಗರ ಪರಿಸರದಲ್ಲಿ ಗಿಡಗಳನ್ನು ನೆಡಲಾಯಿತು. ಅಲ್ಲದೆ 100 ಮನೆಗಳಿಗೆ ತಲಾ 5 ಕೆಜಿ ಅಕ್ಕಿ ಮತ್ತು ಬೇಳೆಯನ್ನು ವಿತರಿಸಲಾಯಿತು.
ಹಯಾತುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಂ ಅಬ್ದುಲ್ ಸತ್ತಾರ್ ಮದನಿ ದುಆಗೈದರು. ಘಟಕದ ಅಧ್ಯಕ್ಷ ಇರ್ಶಾದ್ ಅಜ್ಜಿನಡ್ಕ ಧ್ವಜಾರೋಹಣಗೈದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ದಿಕ್ಸೂಚಿ ಭಾಷಣ ಮಾಡಿದರು.
ಪಕ್ಷದ ಮುಖಂಡ ಹಿದಾಯತ್ ಮಾರಿಪಳ್ಳ, ಸ್ಥಳೀಯ ಪ್ರಮುಖರಾದ ಸುಲೈಮಾನ್ ಹಾಜಿ, ಮೊಯ್ದಿನ್ ಕುಟ್ಟಿ, ಯು.ಮೊಯ್ದಿನ್, ಮುಹಮ್ಮದ್ ಹನೀಫ್ ಅತಿಥಿಗಳಾಗಿದ್ದರು. ಎಸ್‌ಡಿಪಿಐ ಅಜ್ಜಿನಡ್ಕ ಘಟಕದ ಕೋಶಾಧಿಕಾರಿ ಇಬ್ರಾಹಿಂ ಉಚ್ಚಿಲ್ ಸ್ವಾಗತಿಸಿದರು. ಮೊಯ್ದಿನ್ ಎಸ್‌ಬಿ ಅಜ್ಜಿನಡ್ಕ ವಂದಿಸಿದರು.