×
Ad

ಜೂ. 24ರಂದು ಮಸ್ಕತ್‍ನಿಂದ ಮಂಗಳೂರಿಗೆ ಬಾಡಿಗೆ ವಿಮಾನ ಹಾರಾಟ

Update: 2020-06-22 23:11 IST

ಮಂಗಳೂರು : ಇಂದು ರಾತ್ರಿ ಮಸ್ಕತ್‍ನಿಂದ ಮಂಗಳೂರಿಗೆ ತೆರಳಬೇಕಿದ್ದ ವಿಮಾನವನ್ನು ಜೂನ್ 24 ಕ್ಕೆ ಮುಂದೂಡಲಾಗಿದೆ ಎಂದು ಮಸ್ಕತ್ ನ ಇಂಡಿಯನ್ ಸೋಷಿಯಲ್ ಕ್ಲಬ್ ಮಾಹಿತಿ ನೀಡಿದೆ. ಹೊಸ ವೇಳಾಪಟ್ಟಿಯ ಪ್ರಕಾರ ಜೂನ್ 24 ರ ಬೆಳಿಗ್ಗೆ ವಿಮಾನ ಮಂಗಳೂರಿಗೆ ಹೊರಡಲಿದೆ.

ಜೂನ್ 24 ರ ಬೆಳಗ್ಗೆ ವಿಮಾನವು ಮಂಗಳೂರಿಗೆ ಹಾರಲಿದೆ ಎಂದು ಇಂಡಿಯನ್ ಸೋಷಿಯಲ್ ಕ್ಲಬ್ ಪ್ರಯಾಣಿಕರಿಗೆ ಸಂದೇಶ ಕಳುಹಿಸಿದೆ, ಇದಕ್ಕಾಗಿ ಎಲ್ಲಾ ಪ್ರಯಾಣಿಕರು ಇಂದು ಸಂಜೆ 6 ಗಂಟೆಗೆ ಇಂಡಿಯನ್ ಸೋಷಿಯಲ್ ಕ್ಲಬ್‍ಗೆ ಬಂದು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ . ಈ ವಿಮಾನದಲ್ಲಿ 180 ಪ್ರಯಾಣಿಕರು ಪ್ರಯಾಣಿಸಲಿದ್ದು, ಅದರಲ್ಲಿ 24 ಪ್ರಯಾಣಿಕರು ಭಟ್ಕಳ ಮೂಲದವರಾಗಿದ್ದಾರೆ.

ಗಲ್ಫ್ ರಾಷ್ಟ್ರಗಳಿಂದ ಮಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಚಾರ್ಟರ್ಡ್ ವಿಮಾನಗಳು ಇಳಿಯುತ್ತಿರುವುದರಿಂದ, ಮಂಗಳೂರಿನಲ್ಲಿ ಕ್ಯಾರೆಂಟೈನ್ ಸೌಲಭ್ಯವನ್ನು ಒದಗಿಸುವಲ್ಲಿ ಸಮಸ್ಯೆ ಇದೆ, ಇದರಿಂದಾಗಿ ವಿಮಾನವನ್ನು ಮರು ನಿಗದಿಪಡಿಸಲಾಗಿದೆ ಎಂದು ಇಂಡಿಯನ್ ಸೋಶಿಯಲ್ ಕ್ಲಬ್ ತನ್ನ ವಾಟ್ಸಪ್  ಸಂದೇಶದಲ್ಲಿ ತಿಳಿಸಿದೆ.  ಹಾರಾಟದ ನಿಖರವಾದ ಸಮಯವನ್ನು ನಂತರ ಘೋಷಿಸಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News