10,12ನೇ ತರಗತಿ ಪರೀಕ್ಷೆ: ಜೂ.23ರಂದು ಸಿಬಿಎಸ್‌ಇ ನಿರ್ಧಾರ ?

Update: 2020-06-22 19:07 GMT
ಸಾಂದರ್ಭಿಕ ಚಿತ್ರ: PTI

ಹೊಸದಿಲ್ಲಿ, ಜೂ. 23: ಹತ್ತನೇ ಹಾಗೂ 12ನೇ ತರಗತಿಗೆ ಬಾಕಿಯುಳಿದಿರುವ ಪರೀಕ್ಷೆಗಳನ್ನು ನಡೆಸುವ ಕುರಿತಂತೆ ತನ್ನ ನಿರ್ಧಾರವನ್ನು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು ಮಂಗಳವಾರದಂದು ಸುಪ್ರೀಂಕೋರ್ಟ್‌ಗೆ ತಿಳಿಸುವ ನಿರೀಕ್ಷೆಯಿದೆ.

ಕೊರೋನಾ ವೈರಸ್ ಸೋಂಕು ಹಾವಳಿಯ ಹಿನ್ನೆಲೆಯಲ್ಲಿ 10ನೇ ಹಾಗೂ 12ನೇ ತರಗತಿಗಳ ಸಿಬಿಎಸ್‌ಇ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಬಾಕಿಯುಳಿದಿರುವ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಸಿಬಿಎಸ್‌ಇ ಕಳೆದ ವಾರ ನ್ಯಾಯಾಲಯಕ್ಕೆ ತಿಳಿಸಿತ್ತು.

10 ಹಾಗೂ 12ನೇ ತರಗತಿಗೆ ಬಾಕಿಯುಳಿದಿರುವ ಪರೀಕ್ಷೆಗಳನ್ನು ಜುಲೈ 1ರಿಂದ 15ರವರೆಗೆ ನಡೆಸುವ ಸಿಬಿಎಸ್‌ಇನ ನಿರ್ಧಾರವನ್ನು ಪ್ರಶ್ನಿಸಿ ಪಾಲಕರ ಗುಂಪೊಂದು ಸುಪ್ರೀಂಕೋರ್ಟ್ ಮೆಟ್ಟಲೇರಿತ್ತು. ಆಂತರಿಕ ವೌಲ್ಯಮಾಪನ (ಇಂಟರ್‌ನಲ್ ಅಸೆಸೆಂಟ್) ಹಾಗೂ ಪ್ರಾಕ್ಟಿಕಲ್ ಪರೀಕ್ಷೆಗಳಲ್ಲಿನ ವಿದ್ಯಾರ್ಥಿಗಳ ಸಾಧನೆಯನ್ನು ಆಧರಿಸಿ ಅವರಿಗೆ ಅಂಕಗಳನ್ನು ನೀಡಬೇಕೆಂದು ಮಂಡಳಿಯು ಆಗ್ರಹಿಸಿದೆ.

ಮಹಾರಾಷ್ಟ್ರ, ದಿಲ್ಲಿ ಹಾಗೂ ಒಡಿಶಾ ಸರಕಾರಗಳು ಕೂಡಾ ಇಂತಹದೇ ಮನವಿಯನ್ನು ಕೇಂದ್ರ ಮಾನವಸಂಪನ್ಮೂಲ ಸಚಿವಾಲಯ ತಿಳಿಸಿತ್ತು.

 ಪರೀಕ್ಷೆ ಬಗ್ಗೆ ನಿರ್ಧಾರವನ್ನು ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಲಾಗುವುದು. ಸರ್ವೋಚ್ಚ ನ್ಯಾಯಾಲಯದ ನಿರ್ಧಾರದಂತೆ ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಿಬಿಎಸ್‌ಇನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆಗಳ ಒಂದೇ ಸಮನೆ ಏರಿಕೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಪರೀಕ್ಷೆ ನಡೆಸಿದಲ್ಲಿ ವಿದ್ಯಾರ್ಥಿಗಳಿಗೆ ಸೋಂಕು ತಗಲುವ ಅಪಾಯವಿದೆ ಎಂದು ಪಾಲಕರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News