ವೀಸಾ ರದ್ದು: ಟ್ರಂಪ್ ನಿರ್ಧಾರದ ಬಗ್ಗೆ ಗೂಗಲ್ ಸಿಇಒ ಹೇಳಿದ್ದೇನು?

Update: 2020-06-23 04:56 GMT

ವಾಷಿಂಗ್ಟನ್ : ಎಚ್-1ಬಿ ಸೇರಿದಂತೆ ವಿದೇಶಿ ಉದ್ಯೋಗ ವೀಸಾಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ ಆದೇಶದ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಹೊರದೇಶಗಳಿಂದ ಬಂದ ಉದ್ಯೋಗಿಗಳು ಅಮೆರಿಕದ ಆರ್ಥಿಕ ಯಶಸ್ಸಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಇದರ ಜತೆಗೆ ಅಮೆರಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವನಾಯಕನಾಗಿ ಬೆಳೆಯಲು ಕೊಡುಗೆ ನೀಡಿದ್ದಾರೆ. ಗೂಗಲ್ ಕಂಪನಿ ಇಂದು ಈ ಸ್ಥಿತಿಯಲ್ಲಿರಲು ಅವರು ಕಾರಣ ಎಂದು ಟ್ರಂಪ್ ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಪಿಚೈ ಟ್ವೀಟ್ ಮಾಡಿದ್ದಾರೆ.

ಇಂದಿನ ಆದೇಶದ ಬಗ್ಗೆ ತೀವ್ರ ಬೇಸರವಾಗಿದೆ. ನಾವು ವಿದೇಶಗಳಿಂದ ಆಗಮಿಸಿದವರ ಪರವಾಗಿ ನಿಲ್ಲಲಿದ್ದೇವೆ. ಈ ಕೆಲಸ ಎಲ್ಲರಿಗೂ ಉದ್ಯೋಗದ ಅವಕಾಶವನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಮಧ್ಯೆ ಲೀಡರ್‌ಶಿಪ್ ಕಾನ್ಫರೆನ್ಸ್ ಆನ್ ಸಿವಿಲ್ ಆ್ಯಂಡ್ ಹ್ಯೂಮನ್ ರೈಟ್ಸ್‌ ಅಧ್ಯಕ್ಷ ಹಾಗೂ ಸಿಇಒ ವಿನಿತಾ ಗುಪ್ತಾ ಕೂಡಾ ಟ್ರಂಪ್ ಆಡಳಿತದ ಈ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News