ಸತತ 17ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

Update: 2020-06-23 05:33 GMT

 ಹೊಸದಿಲ್ಲಿ, ಜೂ.22 ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳವು ಸತತ 17ನೇ ದಿನವೂ ಮುಂದುವರಿದಿದ್ದು, ಮಂಗಳವಾರ ಕ್ರಮವಾಗಿ 20 ಪೈಸೆ ಹಾಗೂ 55 ಪೈಸೆ ಏರಿಕೆಯಾಗಿದೆ.

ನಿರಂತರ ಹೆಚ್ಚಳದಿಂದ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಈಗ ರೂ.10ರಷ್ಟು ಹಾಗೂ ಪೆಟ್ರೋಲ್ ಬೆಲೆ ರೂ.8.50ರಷ್ಟು ಹೆಚ್ಚಳವಾಗಿದೆ. ಸದ್ಯ ಬೆಂಗಳೂರಿನಲ್ಲಿ ಡೀಸೆಲ್ ಬೆಲೆ 75.59ರೂ. ಹಾಗೂ ಪೆಟ್ರೋಲ್ ಬೆಲೆ 82.32 ರೂ.ಗೆ ಏರಿಕೆಯಾಗಿದೆ.

ದಿಲ್ಲಿಯಲ್ಲಿ ಡೀಸೆಲ್ ದರ 79.40 ರೂ. ಹಾಗೂ ಪೆಟ್ರೋಲ್ ದರ 79.76 ರೂ.ಗೆ ಏರಿಕೆಯಾಗಿದೆ. ಇತ್ತ ಮುಂಬೈನಲ್ಲಿ ಡೀಸೆಲ್ ದರ 77.24 ರೂ. ಹಾಗೂ ಪೆಟ್ರೋಲ್ ದರ 86.36 ರೂ.ಗೆ ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News