ಈ ವರ್ಷ ಭಾರತದಿಂದ ಯಾರಿಗೂ ಹಜ್ ಯಾತ್ರೆಗೆ ಅನುಮತಿಸದೇ ಇರಲು ಸರಕಾರದ ನಿರ್ಧಾರ

Update: 2020-06-23 08:31 GMT
ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ

ಹೊಸದಿಲ್ಲಿ: ಕೊರೋನವೈರಸ್ ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಈ ಬಾರಿ ಸೀಮಿತ ಸಂಖ್ಯೆಯ ತನ್ನ ದೇಶದ ವಾಸಿಗಳಿಗೆ ಮಾತ್ರ ಹಜ್ ಯಾತ್ರೆಗೆ ಅನುಮತಿಸಲು ನಿರ್ಧರಿಸಿರುವುದರಿಂದ ಭಾರತದಿಂದ ಯಾರನ್ನೂ ಈ ವರ್ಷದ ಹಜ್ ಯಾತ್ರೆಗೆ ಕಳುಹಿಸದೇ ಇರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಭಾರತದಿಂದ ಈ ವರ್ಷ ಯಾತ್ರಾರ್ಥಿಗಳನ್ನು ಕಳುಹಿಸದಂತೆ ಮನವಿ ಮಾಡಿ ಕಳೆದ ರಾತ್ರಿ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವ ಮುಹಮ್ಮದ್ ಸಾಲೇಹ್ ಬಿನ್ ತಾಹಿರ್ ಕರೆ ಮಾಡಿದ್ದರು ಎಂದೂ ನಖ್ವಿ ತಿಳಿಸಿದ್ದಾರೆ.

ಜಗತ್ತಿನ ಹಲವು ದೇಶಗಳಲ್ಲಿ ಕೋವಿಡ್-19 ಹಾವಳಿ ವಿಪರೀತವಾಗಿರುವುದರಿಂದ ತನ್ನ ದೇಶದ ನಾಗರಿಕರು ಹಾಗೂ ದೇಶದಲ್ಲಿ ನೆಲೆಸಿರುವ ಇತರ ರಾಷ್ಟ್ರೀಯರನ್ನು ಸೀಮಿತ ಸಂಖ್ಯೆಯಲ್ಲಿ ಈ ಬಾರಿಯ ಹಜ್ ಯಾತ್ರೆಗೆ ಕಳುಹಿಸಲು ನಿರ್ಧರಿಸಿರುವುದಾಗಿ ಸೌದಿ ಅರೇಬಿಯಾ ಈಗಾಗಲೇ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News