×
Ad

ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಮತ್ತೊಂದು ಬಲಿ

Update: 2020-06-23 14:41 IST

ಮಂಗಳೂರು, ಜೂ.23: ಕೊರೋನ ವೈರಸ್ ರೋಗ ನಿಗ್ರಹಕ್ಕೆ ದ.ಕ. ಜಿಲ್ಲಾಡಳಿತವು ಶಕ್ತಿಮೀರಿ ಶ್ರಮ ವಹಿಸುತ್ತಿರುವ ಮಧ್ಯೆಯೇ 70 ವರ್ಷದ ವೃದ್ಧರೊಬ್ಬರು ಇಂದು ಕೊರೋನಕ್ಕೆ ಬಲಿಯಾಗಿದ್ದಾರೆ. ಇದರೊಂದಿಗೆ ದ.ಕ.ಜಿಲ್ಲೆಯಲ್ಲಿ ಕೊರೋನಕ್ಕೆ ಬಲಿಯಾದವರ ಸಂಖ್ಯೆ 9ಕ್ಕೇರಿದೆ.

ನಗರದ ಈ ವ್ಯಕ್ತಿ ಬೆಂಗಳೂರಿನಲ್ಲಿದ್ದು, ಶೀತ-ಕೆಮ್ಮು ಶುರುವಾದ ಬಳಿಕ ಸ್ಥಳೀಯ ವೈದ್ಯರಿಂದ ಔಷಧ ಪಡೆದಿದ್ದರು. ಜೂನ್ ಎರಡನೆ ವಾರ ಮಂಗಳೂರಿಗೆ ಕಾರಿನಲ್ಲಿ ಬಂದಿದ್ದ ಇವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಗಂಟಲಿನ ದ್ರವದ ಮಾದರಿಯ ಪರೀಕ್ಷೆಯಲ್ಲಿ ಕೊರೋನ ಪಾಸಿಟಿವ್ ಬಂದ ಬಳಿಕ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಸಾವಿಗೀಡಾಗಿದ್ದಾರೆ. ವಿಪರೀತ ಧೂಮಪಾನಿಯಾಗಿದ್ದ ಇವರಿಗೆ ಮಧುಮೇಹ ಕೂಡ ಇತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News