×
Ad

ಎಸ್ಕೆಎಸ್ಸೆಸ್ಎಫ್ ಟ್ರೆಂಡ್ ಜಿಲ್ಲಾ ಸಮಿತಿ ರಚನೆ, ಮಾಹಿತಿ ಕಾರ್ಯಾಗಾರ

Update: 2020-06-23 17:07 IST

ಮಂಗಳೂರು : ಎಸ್ಕೆಎಸ್ಸೆಸ್ಎಫ್ ನ ಶೈಕ್ಷಣಿಕ ಉಪವಿಭಾಗವಾದ ಟ್ರೆಂಡ್ ಜಿಲ್ಲಾ ಸಮಿತಿಯ ರಚನೆ ಹಾಗೂ ಮಾಹಿತಿ ಕಾರ್ಯಗಾರವು ಇತ್ತೀಚೆಗೆ ಪಾಣೆಮಂಗಳೂರಿನ ಆಡಿಟೋರಿಯಂನಲ್ಲಿ‌‌ ಎಸ್ಕೆಎಸ್ಸ್ಎಸ್ಎಫ್ ಜಿಲ್ಲಾಧ್ಯಕ್ಷರಾದ ಅಮೀರ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ‌ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಎಫ್ ಜಿಲ್ಲಾ ವರ್ಕಿಂಗ್ ಕಾರ್ಯದರ್ಶಿ ಆರಿಫ್ ಬಡಕಬೈಲು,ಉಪಾಧ್ಯಕ್ಷ ಸಿದ್ದೀಕ್ ಅಬ್ದುಲ್ ಖಾದರ್ ಪ್ರಾಸ್ತಾವಿಕ ಮಾತನಾಡಿದರು. ಟ್ರೆಂಡ್ ಕೇಂದ್ರ‌ ಸಮಿತಿ ಸದಸ್ಯರಾದ ಇಕ್ಬಾಲ್ ಬಾಳಿಲ, ಟ್ರೆಂಡ್ ರಾಜ್ಯ ತರಬೇತುದಾರರಾದ‌ ಅಬ್ದುಲ್ ಸಮದ್ ಸಾಲೆತ್ತೂರು ವಿಷಯ ಮಂಡಿಸಿದರು. ಮುಂದಿನ ಒಂದು ವರ್ಷದ ಶೈಕ್ಷಣಿಕ ಯೋಜನೆಗಳ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು. ಜಿಲ್ಲಾ ಟ್ರೆಂಡ್  ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಅಡ್ಡೂರು ಸ್ವಾಗತಿಸಿ  ವಂದಿಸಿದರು.

ಎಸ್ಕೆಎಸ್ಸೆಸ್ಎಫ್ ಟ್ರೆಂಡ್ ದ.ಕ. ಜಿಲ್ಲಾ ನೂತನ‌  ಸಾರಥಿಗಳ ಆಯ್ಕೆ ಮಾಡಲಾಯಿತು. ಉಸ್ತುವಾರಿ ಯಾಗಿ ಇಕ್ಬಾಲ್ ಬಾಳಿಲ, ಅಧ್ಯಕ್ಷರಾಗಿ ಅಬ್ದುಲ್ ಸಮದ್ ಸಾಲೆತ್ತೂರು, ಉಪಾಧ್ಯಕ್ಷರಾಗಿ ತೌಸೀಫ್ ಪಾಂಡವರಕಲ್ಲು ಮತ್ತು ಅಡ್ವಕೇಟ್ ಬದ್ರುದ್ದೀನ್ ಕುಕ್ಕಾಜೆ  ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ ಅಡ್ಡೂರು, ಜೊತೆ ಕಾರ್ಯದರ್ಶಿಗಳಾಗಿ ನಬ್ಸೀರ್ ಆಲಾಡಿ, ಸಿದ್ದೀಕ್ ನಾವೂರು ಮತ್ತು ನೌಶಾದ್ ಅನ್ಸಾರಿ, ಕೋಶಾಧಿಕಾರಿಯಾಗಿ ಬಶೀರ್ ಯು.ಪಿ. ಬೆಳ್ಳಾರೆ, ವರ್ಕಿಂಗ್ ಸದಸ್ಯರಾಗಿ ಶಫೀಕ್ ಕಟ್ಟತ್ತಿಲ ಮತ್ತು ಖಾದರ್ ಮೊಟ್ಟೆಂಗಾರ್ ಇವರನ್ನು ಆರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News