ಕಾರ್ಕಳ: ಡೆಂಗಿ ವಿರೋಧಿ ಸೇನಾನಿಗಳಿಗೆ ಸನ್ಮಾನ
Update: 2020-06-23 17:31 IST
ಉಡುಪಿ, ಜೂ.23: ಡೆಂಗ್ ವಿರೋಧಿ ಸೇನಾನಿಗಳಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ಗ್ರಾಪಂ ಮಾಳದ ವತಿಯಿಂದ ಸನ್ಮಾನ ಹಾಗೂ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮ ಮಾಳದ ಶ್ರೀರಾಮ ಮಂದರಿದಲ್ಲಿ ಇತ್ತೀಚೆಗೆ ನಡೆಯಿತು.
ಮಳೆಗಾಲದ ಆರಂಭದಲ್ಲಿ ಕಂಡುಬರುವ ಸೊಳ್ಳೆಗಳಿಂದ ಹರಡುವ ಡೆಂಗಿ, ಮಲೇರಿಯಾ ಮುಂತಾದ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಮೀಕ್ಷೆ ಕಾರ್ಯ ಆರೋಗ್ಯ, ಶಿಕ್ಷಣ ಮಾಹಿತಿ ನೀಡುತ್ತಾ, ನಿಯಂತ್ರಣ ಕಾರ್ಯದಲ್ಲಿ ಹಗಲಿರುಳು ಶ್ರಮಿಸಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರನ್ನು ಡೆಂಗಿ ವಿರೋಧಿ ದಿನಾಚರೆಯಲ್ಲಿ ಗುರುತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೂಡಬಿದ್ರೆ ಗ್ರಾಮೀಣ ಕೂಟ ವತಿಯಿಂದ ಕೊರೋನ ವಾರಿಯರ್ಸ್‌ಗಳಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳನ್ನು ಮಲ್ಲಿಕಾರ್ಜುನ್ ವಿತರಿಸಿದರು.