ಉದ್ಯಾವರ: ಯುಎಫ್‌ಸಿಯಿಂದ ಸಾಗುವಾನಿ ಗಿಡ ವಿತರಣೆ
ಉದ್ಯಾವರ, ಜೂ.23: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ವರ್ಷ ಪ್ರತಿ ದಂತೆ ಈ ಬಾರಿಯೂ ಸಾರ್ವಜನಿಕರಿಗೆ ಸಾಗುವಾನಿ ಗಿಡಗಳ ವಿತರಣಾ ಕಾರ್ಯಕ್ರಮ ಇತ್ತೀಚಿಗೆ ಸಂಸ್ಥೆಯ ಕಾರ್ಯಾಲಯದಲ್ಲಿ ಜರಗಿತು.
ಪ್ರತೀ ವರ್ಷ ಒಂದೊಂದು ಶಾಲೆಯನ್ನು ಕೇಂದ್ರೀಕರಿಸಿ ಅಲ್ಲಿನ ವಿದ್ಯಾರ್ಥಿ ಗಳಿಗೆ ಗಿಡ ವಿತರಿಸಿ ಒಂದು ವರ್ಷದ ಅವಧಿಯಲ್ಲಿ ಉತ್ತಮವಾಗಿ ಬೆಳೆಸಿದವರಿಗೆ ನಗದು ಬಹುಮಾನವನ್ನು ನೀಡುವ ಕಾರ್ಯಕ್ರಮ ಹಮ್ಮಿ ಕೊಳ್ಳುತಿದ್ದ ಸಂಸ್ಥೆ, ಈ ಬಾರಿ ಶಾಲೆಗಳು ಪುನರಾರಂಭಗೊಳ್ಳದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಸಾಗುವಾನಿ ಗಿಡವನ್ನು ವಿತರಿಸಿದೆ.
ಸರಳ ಸಮಾರಂದಲ್ಲಿ ಸಂಸ್ಥೆಯನಿರ್ದೇಶಕ, ರಾಜ್ಯಸಾ ಸದಸ್ಯ ಆಸ್ಕರ್ ಫೆರ್ನಾಂಡಿಸ್‌ರ ಆಪ್ತ ಸಹಾಯಕ, ಸಾಹಿತಿ ಉದ್ಯಾವರ ನಾಗೇಶ್ ಕುಮಾರ್ ಗಿಡಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಉದ್ಯಾವರ ಗ್ರಾಪಂ ಉಪಾಧ್ಯಕ್ಷ ರಿಯಾಝ್ ಪಳ್ಳಿ, ಸಂಸ್ಥೆಯ ಅಧ್ಯಕ್ಷ ತಿಲಕ್‌ರಾಜ್ ಸಾಲ್ಯಾನ್, ಕೋಶಾಧಿಕಾರಿ ಸೋಮಶೇಖರ್ ಸುರತ್ಕಲ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ, ಮಾಜಿ ತಾಪಂ ಸದಸ್ಯ ಗಿರೀಶ್ ಕುಮಾರ್, ಆಬಿದ್ ಅಲಿ, ಪುಂಡರೀಶ್ ಕುಂದರ್, ಮೇರಿ ಡಿ’ಸೋಜಾ, ಲೋರೆನ್ಸ್ ಡೇಸಾ, ಶೇಖರ್ ಕೆ. ಕೋಟ್ಯಾನ್, ಹಮೀದ್ ಸಾಬ್ಜಾನ್, ಮಹಮ್ಮದ್ ನಬಿಲ್ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷ ತಿಲಕ್ ರಾಜ್ ಸಾಲ್ಯಾನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ವಂದಿಸಿದರು.