ಸರಕಾರಿ ಉದ್ಯೋಗದ ಕುರಿತ ಮಾಹಿತಿ ಕಾರ್ಯಕ್ರಮ
Update: 2020-06-23 21:25 IST
ಕಾಪು, ಜೂ.23: ಚಂದ್ರನಗರ ಅಲ್ನೂರ್ ಮದ್ರಸ ವತಿಯಿಂದ ಸರಕಾರಿ ಉದ್ಯೋಗದ ಬಗ್ಗೆ ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮ ಮದ್ರಸದಲ್ಲಿ ಸೋಮವಾರ ಜರಗಿತು.
ಅಧ್ಯಕ್ಷತೆಯನ್ನು ಚಂದ್ರನಗರ ಮಸೀದಿ ಅಧ್ಯಕ್ಷ ಅಬ್ದುಲ್ ರೆಹ್ಮಾನ್ ವಹಿಸಿ ದ್ದರು. ಮಸೀದಿ ಖತೀಬ್ ಅಬ್ದುಲ್ ಬಷೀರ್ ಹನೀಫಿ ಉಸ್ತಾದರು ದುವಾ ನೆರವೇರಿಸಿದರು. ನ್ಯಾಯವಾದಿ ಹಮ್ಜತ್ ಹೆಜಮಾಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಅಬ್ದುಲ್ ರಝಾಕ್ ಪೊಲೀಸ್ ಇಲಾಖೆಯ ಕುರಿತು ಮತ್ತು ನೌಝಾಲ್ ಮೂಲ್ಕಿ ಸರಕಾರಿ ಉದ್ಯೋಗದ ಬಗ್ಗೆ ಮಾಹಿತಿ ನೀಡಿದರು. ಮಸೀದಿ ಕಾರ್ಯದರ್ಶಿ ಫಕ್ರುದ್ದೀನ್ ಅಲಿ, ಸದಸ್ಯರಾದ ಹನೀಫ್, ವಾಹಿದ್ ಮೊದಲಾದವರು ಉಪಸ್ಥಿತರಿದ್ದರು.