ಅಂತರ್‌ರಾಷ್ಟ್ರೀಯ ರೋಟರಿ ಜಿಲ್ಲಾ ವಾರ್ಷಿಕ ಪ್ರಶಸ್ತಿ ಪ್ರದಾನ
ಮಂಗಳೂರು, ಜೂ.23: ರೋಟರಿ ಜಿಲ್ಲಾ 3181ರ ವತಿಯಿಂದ ಅಂತರಾಷ್ಟ್ರೀಯ ರೋಟರಿ ಜಿಲ್ಲಾ 2019-20 ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಗರದ ಹೋಟೇಲ್ ಮಾಯಾ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು.
ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯು ವಿವಿಧ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಾಧಿಸಿದ ವಿಶಿಷ್ಟ ಸಾಧನೆಗೆ ದಾಖಲೆಯ 20 ಪ್ರಶಸ್ತಿಗಳನ್ನು ಪಡೆಯಿತು. ರೋಟರಿ ಮಂಗಳೂರು ಸೆಂಟ್ರಲ್‌ನ ಪದಾಧಿಕಾರಿಗಳಾದ ಜೋಯಲ್ ಲೋಬೋ, ಕೆ.ಎಂ. ಹೆಗ್ಡೆ, ಡಾ. ದೇವದಾಸ್ ರೈ, ಮಂಜುನಾಥ್ ರೇವಣ್‌ಕ್ಕರ್‌ರವರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ರೋಟರಿ ಜಿಲ್ಲಾ ಗವರ್ನರ್ ಮೈಸೂರು ಮೂಲದ ಜೋಸೆಫ್ ಮಾಥ್ಯು ಅತಿಥಿಯಾಗಿ ಪಾಲ್ಗೊಂಡಿದ್ದರು. ಚುನಾಯಿತ ಗವರ್ನರ್ ರಂಗನಾಥ್ ಭಟ್, ನಿಯೋಜಿತ ಗವರ್ನರ್ ರವೀಂದ್ರ ಭಟ್, ಸಹಾಯಕ ಗವರ್ನರ್ ರವಿಚಂದ್ರ, ಗೀತಾನಂದ ಪೈ, ಸುಮಿತ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಮಂಗಳೂರು ಉತ್ತರ ಸಂಸ್ಥೆಯ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಸ್ವಾಗತಿಸಿದರು.ರೋಟರಿ ಸುರತ್ಕಲ್ ಸಂಸ್ಥೆಯ ಅಧ್ಯಕ್ಷ ರಮೇಶ್ ರಾವ್ ವಂದಿಸಿದರು.