ದಕ್ಷಿಣ ಮೆಕ್ಸಿಕೊದಲ್ಲಿ ಭೂಕಂಪ, ಆರು ಮಂದಿ ಸಾವು
Update: 2020-06-24 12:27 IST
ಲಾ ಕ್ರೂಸೆಸಿಟಾ, ಜೂ.24: ದಕ್ಷಿಣ ಮೆಕ್ಸಿಕೊದ ಪೆಸಿಫಿಕ್ ಕೋಸ್ಟ್‌ನಲ್ಲಿ ಮಂಗಳವಾರ ಸಂಭವಿಸಿದ 7.4ರಷ್ಟು ಪ್ರಮಾಣದ ಪ್ರಬಲ ಭೂಕಂಪನಕ್ಕೆ ಕನಿಷ್ಟ ಆರು ಮಂದಿ ಸಾವನ್ನಪ್ಪಿದ್ದಾರೆ.
ಈ ಘಟನೆಯಿಂದಾಗಿ ಹಳ್ಳಿಗಳ ಸಂಪರ್ಕ ಕಳೆದುಹೋಗಿದೆ. ಮೆಕ್ಸಿಕೊದ ನೂರಾರು ಮೈಲುಗಳ ದೂರ ಕಟ್ಟಡಗಳಿಗೆ ಹಾನಿಯಾಗಿದೆ.
ಮೆಕ್ಸಿಕೊದ ಪ್ರವಾಸಿ ಪಟ್ಟಣ ಲಾ ಕ್ರೂಸೆಸಿಟಾದಲ್ಲಿ ಭೂಕಂಪದ ಕೇಂದ್ರಬಿಂದುವಿದೆ. ಆತಂಕಗೊಂಡಿದ್ದ ನಿವಾಸಿಗರು ಮನೆಯಿಂದ ಹೊರಬಂದು ಕೆಲವು ಗಂಟೆಗಳ ಕಾಲ ರಸ್ತೆಯಲ್ಲಿ ನಿಂತುಕೊಂಡಿದ್ದರು. ಭೂಕಂಪನಕ್ಕೆ ಹಲವು ಮನೆಗಳ ಗೋಡೆಗಳಲ್ಲಿ ಬಿರುಕುಬಿಟ್ಟಿದ್ದು, ನಿವಾಸಿಗರು ರಸ್ತೆಯಲ್ಲಿರುವ ತ್ಯಾಜ್ಯವನ್ನು ಹೊರಹಾಕುತ್ತಿದ್ದಾರೆ.