ಮಾಸ್ಕೊದಲ್ಲಿ ವಿಜಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ಭಾರತ-ಚೀನಾ ಸೇನೆ
Update: 2020-06-24 14:34 IST
ಮಾಸ್ಕೊ,ಜೂ.24: ಭಾರತೀಯ ಹಾಗೂ ಚೀನಾ ಪಡೆಗಳು ಇತರ ದೇಶಗಳ ಜೊತೆಗೆ ರಶ್ಯದ ರಾಜಧಾನಿ ಮಾಸ್ಕೊದಲ್ಲಿ ಬುಧವಾರ ವಿಜಯೋತ್ಸವ ಸೇನಾ ಪಥಸಂಚಲನದಲ್ಲಿ ಭಾಗವಹಿಸಿವೆ.
ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎರಡನೇ ಮಹಾಯುದ್ಧದಲ್ಲಿನ 75ನೇ ವಾರ್ಷಿಕ ವಿಜಯೋತ್ಸವದ ದಿನಾಚರಣೆಯ ಕಾರ್ಯಕ್ರಮದಲ್ಲಿ ಚೀನಾದ ಜನರಲ್ ವೀ ಫೆಂಗ್ ಜೊತೆಗೆ ಭಾಗವಹಿಸಿದರು.
ಭಾರತ ಹಾಗೂ ಚೀನಾ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಿರುವ ವರದಿಯನ್ನು ರಶ್ಯ ನಿರಾಕರಿಸಿದೆ. ವಿವಾದವನ್ನು ಬಗೆಹರಿಸಿಕೊಳ್ಳಲು ಭಾರತ ಹಾಗೂ ಚೀನಾ ದೇಶಗಳಿಗೆ ನಮ್ಮ ನೆರವಿನ ಅಗತ್ಯವಿಲ್ಲ ಎಂದು ರಶ್ಯ ಹೇಳಿದೆ.