ಮಂಗಳೂರು: ಕೇಂದ್ರ ಜುಮಾ, ಈದ್ಗಾ ಮಸೀದಿಯಲ್ಲಿ ಜಮಾಅತ್ ಒಳಪಟ್ಟವರಿಗೆ ಮಾತ್ರ ನಮಾಝ್‌ಗೆ ಅವಕಾಶ
Update: 2020-06-24 16:31 IST
ಮಂಗಳೂರು, ಜೂ. 24: ನಗರದ ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಜುಮಾ ಮಸೀದಿಯಲ್ಲಿ ಜೂ. 26ರ ಜುಮಾ ನಮಾಝಿಗೆ ಮತ್ತು ಇತರ ದಿನಗಳ ಐದು ಹೊತ್ತಿನ ಕಡ್ಡಾಯ ನಮಾಝ್ ಗಳಿಗೆ ಮಸೀದಿಗೆ ಒಳಪಟ್ಟ ಜಮಾಅತ್ ಸದಸ್ಯರಿಗೆ ಮತ್ತು ಮಸೀದಿಯ ಪರಿಸರದವರಿಗೆ ಮಾತ್ರ ಅವಕಾಶವಿರುತ್ತದೆ.
ಹೊರಗಿನ ವ್ಯಕ್ತಿಗಳಿಗೆ ಅವಕಾಶ ಇರುವುದಿಲ್ಲ ಎಂದು ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿ ಅಧ್ಯಕ್ಷ ಹಾಜಿ ವೈ. ಅಬ್ದುಲ್ಲ ಕುಂಞಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.