ಕೊರೋನದಿಂದ ಮೃತ್ಯು : ಮುಕ್ಕಚೇರಿಯಲ್ಲಿ ಅಂತ್ಯಕ್ರಿಯೆ
ಮುಕ್ಕಚೇರಿ : ಕೊರೋನ ಸೋಂಕಿನಿಂದ ಮೃತಪಟ್ಟ ಮಹಿಳೆಯನ್ನು ಮುಕ್ಕಚೇರಿಯ ಸಿದ್ದೀಕ್ ಜುಮಾ ಮಸೀದಿಯ ದಫನ ಭೂಮಿಯಲ್ಲಿ ದಫನ ಮಾಡಲಾಯಿತು.
ಕಬ್‌ರ್ ತೋಡುವ ವ್ಯವಸ್ಥೆಯನ್ನು ಜಮಾಅತ್ ಸಮಿತಿ ವತಿಯಿಂದ ಮಾಡಲಾಗಿತ್ತು. ಅಂತ್ಯಕ್ರಿಯೆಯಲ್ಲಿ ಶಾಸಕ ಯು.ಟಿ.ಖಾದರ್, ಜೆಡಿಎಸ್ ನಾಯಕ ಇಬ್ರಾಹೀಂ ತವಕ್ಕಲ್, ಉಳ್ಳಾಲ ನಗರಸಭೆ ಆರೋಗ್ಯ ಅಧಿಕಾರಿ ಜೈಶಂಕರ್ ಮತ್ತಿತರರು ಭಾಗವಹಿಸಿದ್ದರು.
ಪಿಎಫ್‌ಐ ಕಾರ್ಯಕರ್ತರ ಸಹಕಾರ : ಕೊರೋನ ಸೋಂಕು ತಗಲಿ ಮಂಗಳೂರು ನಗರದಲ್ಲಿ ಮೃತ ಹೊಂದಿದ ಎರಡನೇ ಮೃತದೇಹದ ದಫನ ಕಾರ್ಯದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತ ರಫೀಕ್ ಉಳ್ಳಾಲ್‌ರ ನೇತೃತ್ವದ 8 ಮಂದಿಯ ತಂಡ ಸಹಕರಿಸಿರುವುದಾಗಿ ತಿಳಿದುಬಂದಿದೆ.
ದ.ಕ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಪಾಪ್ಯುಲರ್ ಫ್ರಂಟ್‌ನಿಂದ ಆಯ್ದ 30 ಮಂದಿ ಕಾರ್ಯಕರ್ತರಿಗೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಕೋವಿಡ್ ಬಾಧಿತ ಮೃತದೇಹಗಳ ಅಂತ್ಯಸಂಸ್ಕಾರದ ಮಾಹಿತಿ ಕಾರ್ಯಾಗಾರವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ವೆನ್ಲಾಕ್ ಆಸ್ಪತ್ರೆಯ ಖ್ಯಾತ ಚರ್ಮರೋಗ ತಜ್ಞ ಡಾ.ನವೀನ್‌ಕುಮಾರ್ ಅವರಿಂದ ಕಾರ್ಯಕರ್ತರು ತರಬೇತಿ ಪಡೆದಿದ್ದರು.