×
Ad

ಮಂಗಳೂರು: ಮ್ಯಾನ್ ಹೋಲ್ ಗೆ ಇಳಿದು ದುರಸ್ತಿ ಮಾಡಿದ ಕಾರ್ಪೊರೇಟರ್ !

Update: 2020-06-24 21:11 IST

ಮಂಗಳೂರು, ಜೂ.24: ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರೊಬ್ಬರು ಮ್ಯಾನ್ ಹೋಲ್ ಗೆ ಇಳಿದು ದುರಸ್ತಿ ಕಾರ್ಯ ನಡೆಸಿದ್ದಾರೆ.

ಹೀಗೆ ವಿಭಿನ್ನವಾಗಿ ಕಾಣಿಸಿಕೊಂಡವರು ಮಂಗಳೂರಿನ ಕದ್ರಿ ಕಂಬಳ ವಾರ್ಡ್‌ನ ಬಿಜೆಪಿ ಕಾರ್ಪೊರೇಟರ್ ಮನೋಹರ ಶೆಟ್ಟಿ.

ಕದ್ರಿ ಕಂಬಳ ರಸ್ತೆಯಲ್ಲಿನ ಚರಂಡಿಯಲ್ಲಿ ಮಳೆ ನೀರಿನ ಹರಿವಿನ ಸಮಸ್ಯೆಯಾಗಿ ತಡೆಯುಂಟಾಗಿತ್ತು. ಸ್ಥಳದಲ್ಲಿ ಕಾರ್ಮಿಕರು ಇದ್ದ ಹೊರತಾಗಿಯೂ ಅಲ್ಲಿದ್ದ ಕಾರ್ಪೊರೇಟರ್ ಮನೋಹರ್ ಶೆಟ್ಟಿ ಚೇಂಬರ್ ಒಳಗಡೆ ಇಳಿದಿದ್ದಾರೆ. ಇಲ್ಲಿನ ಸಮಸ್ಯೆ ಅರಿತ ಕಾರ್ಪೊರೇಟರ್ ಮನೆಯಿಂದ ಒಂದು ಜೊತೆ ಬದಲಿ ಬಟ್ಟೆಯನ್ನು ತರಿಸಿಕೊಂಡು ಚೇಂಬರ್ ಒಳಗಡೆ ಇಳಿದು ತಾನೇ ಸ್ವತಃ ಕೆಲಸ ಮಾಡಿ ಚರಂಡಿ ಸರಿಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News