ಎಸ್ಕೆಎಸ್ಸೆಸ್ಸೆಫ್ ಸರ್ಗಲಯ ಸಮಿತಿ ರಚನೆ
ಬಂಟ್ವಾಳ, ಜೂ.24: ಎಸ್ಕೆಎಸ್ಸೆಸ್ಸೆಫ್ ಸರ್ಗಲಯ ವಿಭಾಗದ ಜಿಲ್ಲಾ ಸಮಿತಿಯನ್ನು ಇತ್ತೀಚೆಗೆ ಆಲಡ್ಕ ಸಭಾಭವನದಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು.
ಕಾರ್ಯಕ್ರಮಕ್ಕೆ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸೈಯ್ಯದ್ ಅಮೀರ್ ತಂಙಳ್ ಕಿನ್ಯಾ ಅವರು ದುಆ ಮೂಲಕ ಚಾಲನೆ ನೀಡಿದರು. ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ಅವರು ಉದ್ಘಾಟಿಸಿದರು. ಅಬೂ ಸ್ವಾಲಿಹ್ ಫೈಝಿ ವಿಷಯ ಮಂಡಿಸಿದರು. ಸಭೆಯಲ್ಲಿ ಸರ್ಗಲಯದ ಮುಂದಿನ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು.
ಸರ್ಗಲಯ ಉಸ್ತುವಾರಿಯಾಗಿ ಇಮ್ತಿಯಾಝ್ ಇಡ್ಯ, ಚೇರ್ಮನ್ ಝಕರಿಯಾ ಮುಸ್ಲಿಯಾರ್ ಕಡಬ, ಕನ್ವೀನರ್ ಆಗಿ ನಿಸಾರ್ ಬೆಂಗ್ರೆ, ವೈಸ್ ಚೇರ್ಮಾನ್ ಆಗಿ ಅಹ್ಮದ್ ನಈಂ ಫೈಝಿ ಅಲ್ ಮಹ್ ಬರಿ, ಸಿರಾಜುದ್ದೀನ್ ಮುಸ್ಲಿಯಾರ್ ಕುಕ್ಕಾಜೆ, ವೈಸ್ ಕನ್ವೀನರಾಗಿ ಮುಹಮ್ಮದ್ ಕಲಂದರ್ ತುಂಬೆ, ಫಯಾಝ್ ಅಝ್ ಹರಿ ಕುಂತೂರು ಮತ್ತು ವರ್ಕಿಂಗ್ ಕಾರ್ಯದರ್ಶಿಯಾಗಿ ಯಾಸಿರ್ ಅರಫಾತ್ ಕೌಸರಿ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಲ್ಲಾ ವಲಯದ ಸರ್ಗಲಯ ವಿಭಾಗದ ಚೇರ್ಮಾನ್ , ಕನ್ವೀನರ್ ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.