ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಮೂರು ನೂತನ ಬಿ.ಟೆಕ್ ಕೋಸ್ ಆರಂಭ
ಮಂಗಳೂರು, ಜೂ.25: ನಗರದ ಹೊರವಲಯದ ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಹಾಗೂ ಹೊಲೊಸೂಟ್ ಸಿಂಗಪೂರ್ ಸಹಯೋಗಗದೊಂದಿಗೆ ದ್ವಿತೀಯ ಪಿಯುಸಿ ವಿಜ್ಞಾನದಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಮೂರು ನೂತನ ಬಿ.ಟೆಕ್ ಹಾನರ್ಸ್ ಪದವಿ ಆರಂಭಿಸಿದೆ.
ಬಿ.ಟೆಕ್ ಇನ್ ರೊಬೊಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮಿಷನ್ ಲರ್ನಿಂಗ್, ಬಿ.ಟೆಕ್ ಇನ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವರ್ಚುವಲ್ ರಿಯಾಲಿಂಟಿ ಮತ್ತು ಬಿ.ಟೆಕ್ ಇನ್ ಐಒಟಿ ರೊಬೊಟಿಕ್ಸ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೋರ್ಸ್ ಆರಂಭವಾಗಲಿವೆ.
ಭಾರತದಲ್ಲಿ ರೋಬೊಟಿಕ್ ತಂತ್ರಜ್ಞಾನವನ್ನು ಹಲವಾರು ಕ್ಷೇತ್ರದಲ್ಲಿ ಬಳಕೆ ಮಾಡಲಾಗುತ್ತಿದೆ. ಸ್ವಯಂಚಾಲಿತ ಕೈಗಾರಿಕಾ ವಲಯಗಳು ಮಾತ್ರವಲ್ಲದೆ, ಏರೋಸ್ಪೇಸ್, ಕೃಷಿ, ಆರೋಗ್ಯ ಕ್ಷೇತ್ರ ಹಾಗೂ ರಕ್ಷಣಾ ವಲಯಗಳಲ್ಲಿ ರೋಬೊಟಿಕ್ ತಂತ್ರಜ್ಞಾನದ ಬೇಡಿಕೆ ಹೆಚ್ಚುತ್ತಿದೆ.
ವಿದ್ಯಾರ್ಥಿಗಳು ವಿವಿಧ ವಲಯಗಳಾದ ಇಂಜಿನಿಯರಿಂಗ್ ರೋಬೊಟಿಕ್ಸ್ ಸಂಶೋಧನೆ ಮತ್ತು ಅಭಿವೃದ್ಧಿ, ರೋಬೊಟಿಕ್ಸ್‌ನಲ್ಲಿ ಪ್ರಾಡಕ್ಟ್ ಡೆವಲಪರ್ ಹೀಗೆ ರೋಬೊಟಿಕ್ಸ್‌ನ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲು ಅರ್ಹರಾಗಿದ್ದಾರೆ.
ಬಿ.ಟೆಕ್‌ನ ಕೊನೆಯ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಆವಿಷ್ಕಾರಗಳಿಗೆ ಪೇಟೆಂಟ್ ನೀಡುವುದರ ಜೊತೆಗೆ ಉನ್ನತ ಕೈಗಾರಿಕೆಗಳಲ್ಲಿ ಇಂಟರ್ನ್‌ಶಿಪ್ ಮಾಡಲು ಅವಕಾಶವಿದೆ. ವಿಶ್ವವಿದ್ಯಾಲಯವು ಕ್ಯಾಂಪಸ್‌ನಿಂದ ಬ್ಯಾಂಕ್ ಶಿಕ್ಷಣ ಸಾಲ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ, ದ.ಕ. ಮತ್ತು ಉಡುಪಿ ಜಿಲ್ಲೆಗಳ ತಾಲೂಕು ಕೇಂದ್ರಗಳಿಂದ ಕಾಲೇಜು ಬಸ್ ಸೌಲಭ್ಯ ಒದಗಿಸಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.