ಡಿಕೆಶಿ ಪ್ರತಿಜ್ಞಾ ಕಾರ್ಯಕ್ರಮ: ಮಾಜಿ ಸಚಿವ ಜನಾರ್ದನ ಪೂಜಾರಿ ಜತೆ ಸಮಾಲೋಚನೆ

Update: 2020-06-25 17:45 GMT

ಮಂಗಳೂರು, ಜೂ. 25: ಬೆಂಗಳೂರಿನಲ್ಲಿ ಜುಲೈ 2 ರಂದು ಕೆ ಪಿ ಸಿ ಸಿ ಕಚೇರಿಯಲ್ಲಿ ನಡೆಯಲಿರುವ ಪ್ರತಿಜ್ಞಾ ಕಾರ್ಯಕ್ರಮದ ಬಗ್ಗೆ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಯವರ ಜತೆ ಸಮಾಲೋಚನೆ ನಡೆಸಲು ಕೆ ಪಿ ಸಿ ಸಿ ತಂಡ ಇಂದು ಭೇಟಿ ನೀಡಿದೆ.

ಜಿ. ಎ. ಬಾವಾ ನೇತೃತ್ವದಲ್ಲಿ ತಂಡ ಜನಾರ್ದನ ಪೂಜಾರಿಯವರನ್ನು ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ಪೂಜಾರಿ ನೂತನವಾಗಿ ಆಯ್ಕೆಯಾದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ಗೆ ಅಭಿನಂದನೆ ಸಲ್ಲಿಸಿದರು. ಅವರೊಂದಿಗೆ ಕಾರ್ಯಾಧ್ಯಕ್ಷರಾಗಿ ಪದ ಗ್ರಹಣ ಮಾಡುತ್ತಿರುವ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲಿಂ ಅಹ್ಮದ್ ರವರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

ಪೂಜಾರಿಯವರು ಹಿಂದೊಮ್ಮೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ. ಕೆ. ಶಿವಕುಮಾರ್ ಸೂಕ್ತ ಹಾಗೂ ಯೋಗ್ಯ ವ್ಯಕ್ತಿಯಾಗಿದ್ದು ಅವರಿಂದ ಪಕ್ಷ ಬಲವರ್ಧನೆಯಾಗಲಿದೆ. ಮುಂದೆ ರಾಜ್ಯದ ಮುಖ್ಯಮಂತ್ರಿಯಾಗಿ ಜನ ಸೇವೆ ಮಾಡಲಿದ್ದಾರೆ ಎಂದು ಹೇಳಿದ್ದರು. ಪ್ರಸ್ತುತ ಕೊರೋನ ರೋಗದಿಂದ ಜನರು ತತ್ತರಿದ್ದಾರೆ. ಆದಷ್ಟು ಬೇಗ ಈ ರೋಗವು ನಿವಾರಣೆಯಾಗಿ ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಕುದ್ರೋಳಿ ಗೋಕರ್ಣನಾಥ ದೇವರಲ್ಲಿ ಪ್ರಾರ್ಥಿಸುವುದಾಗಿ ಪೂಜಾರಿ ಯವರು ಈ ಭೇಟಿಯಾದ ತಂಡಕ್ಕೆ ತಿಳಿಸಿದರು.

ಕೆಪಿಸಿಸಿ ಪದಾಧಿಕಾರಿಗಳಾದ ಕಳ್ಳಿಗೆ ತಾರಾನಾಥ್ ಶೆಟ್ಟಿ, ಪುರುಷೋತ್ತಮ್ ಚಿತ್ರಾಪುರ, ಅಶ್ವಿನಿ ಕುಮಾರ್ ರೈ ಹಾಗೂ ಡಾ. ಬಿ.ಜಿ. ಸುವರ್ಣ, ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News