ಎಚ್-1ಬಿ ವೀಸಾ ಅಮಾನತಿನಿಂದ ಅಮೆರಿಕಕ್ಕೆ ನಷ್ಟ

Update: 2020-06-25 17:49 GMT

ವಾಶಿಂಗ್ಟನ್, ಜೂ. 25: ಎಚ್-1ಬಿ ಹಾಗೂ ಇತರ ಉದ್ಯೋಗ ವೀಸಾಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರದ್ದುಪಡಿಸಿರುವುದು ಹಾಗೂ ವಲಸೆ ಕುರಿತ ಇತರ ನಿರ್ಬಂಧಾತ್ಮಕ ನೀತಿಗಳು ಅಮೆರಿಕ ಮತ್ತು ಅದರ ಆರ್ಥಿಕತೆಗೆ ಮಾರಕವಾಗಿದೆ ಎಂದು ಅಮೆರಿಕ-ಭಾರತ ವ್ಯಾಪಾರ ಮಂಡಳಿ (ಯುಎಸ್‌ಐಬಿಸಿ)ಯ ಅಧ್ಯಕ್ಷೆ ನಿಶಾ ದೇಸಾಯಿ ಬಿಸ್ವಾಲ್ ಹೇಳಿದ್ದಾರೆ.

‘‘ಅಮೆರಿಕ ಅಧ್ಯಕ್ಷರ ಘೋಷಣೆಯು ದುರದೃಷ್ಟಕರವಾಗಿದೆ’’ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದರು.

ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಲ್ಲಿ ಜನಪ್ರಿಯವಾಗಿರುವ ಎಚ್-1ಬಿ ವೀಸಾ ಹಾಗೂ ವಿದೇಶೀಯರಿಗೆ ಅನ್ವಯಿಸುವ ಇತರ ಉದ್ಯೋಗ ವೀಸಾಗಳನ್ನು ಈ ವಾರದ ಆರಂಭದಲ್ಲಿ ಈ ವರ್ಷದ ಕೊನೆಯವರೆಗೆ ಟ್ರಂಪ್ ಅಮಾನತಿನಲ್ಲಿಟ್ಟಿದ್ದಾರೆ.

‘‘ಹಲವಾರು ವರ್ಷಗಳಲ್ಲಿ ವಿದೇಶೀಯರು, ಅದರಲ್ಲೂ ಮುಖ್ಯವಾಗಿ ಕೌಶಲಭರಿತ ಕೆಲಸಗಾರರು ಅಮೆರಿಕಕ್ಕೆ ವಲಸೆ ಬಂದ ಕಾರಣದಿಂದಾಗಿ ಅಮೆರಿಕಕ್ಕೆ ತುಂಬಾ ಪ್ರಯೋಜನವಾಗಿದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News