ಪಿಲಿಕುಳ ನಿಸರ್ಗಧಾಮ: ನಾಯಿಗಳ ದಾಳಿಗೆ 10 ಕಾಡುಕುರಿಗಳು ಸಾವು
Update: 2020-06-26 13:16 IST
ಮಂಗಳೂರು, ಜೂ.26: ನಾಯಿಗಳು ದಾಳಿ ನಡೆಸಿದ್ದರಿಂದ ಸುಮಾರು 10 ಕಾಡುಕುರಿಗಳು ಅಸುನೀಗಿದ ಘಟನೆ ನಗರದ ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಐದರಷ್ಟು ಕಾಡುಕುರಿಗಳು ಗಾಯಗೊಂಡಿವೆ ಎಂದು ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ಸುರಿದ ಗಾಳಿಮಳೆಗೆ ಮರಬಿದ್ದು ನಿಸರ್ಗಧಾಮದ ಆವರಣ ಗೋಡೆ ಒಂದು ಕಡೆ ಕುಸಿದಿದೆ. ಇಲ್ಲಿಂದ ಒಳನುಗ್ಗಿರುವ ನಾಯಿಗಳು ಕಾಡುಕುರಿಗಳ ಮೇಲೆ ಎರಗಿವೆ. ಸುಮಾರು 40ರಷ್ಟಿದ್ದ ಕಾಡುಕುರಿಗಳ ಪೈಕಿ 10 ಸತ್ತಿವೆ. ಐದರಷ್ಟು ಗಾಯಗೊಂಡಿವೆ. ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪಿಲಿಕುಳ ನಿಸರ್ಗಧಾಮದ ಅಧಿಕಾರಿ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.