ಬೊಳ್ಳೂರು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಸಂಸ್ಥಾಪನಾ ದಿನಾಚರಣೆ
ಮಂಗಳೂರು, ಜೂ.26: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ 94 ವರ್ಷಗಳನ್ನು ಪೊರೈಸಿ ಇಂದು ತನ್ನ ಸಂಸ್ಥಾಪಕ ದಿನವನ್ನು ದೇಶದೆಲ್ಲೆಡೆ ಆಚರಿಸುತ್ತಿದ್ದು, ಇದರ ಅಂಗವಾಗಿ ಎಸ್ಕೆಎಸ್ಸೆಸ್ಸೆಫ್ ಬೊಳ್ಳೂರು ಯೂನಿಟ್ ಆಶ್ರಯದಲ್ಲಿ ಸಂಸ್ಥಪಾನ ದಿನವನ್ನು ಬೊಳ್ಳೂರಿನ ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ಮುಂಭಾಗದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ನೇತೃತ್ವವನ್ನು ಶೈಖುನಾ ಬೊಳ್ಳೂರು ಉಸ್ತಾದ್ ವಹಿಸಿ ದುಆದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದ್ವಜಾರೋಹಣಗೈದರು.
ತ್ವಯ್ಯಿಬ್ ಫೈಝಿ ಬೊಳ್ಳೂರು ಮಾತನಾಡಿದರು.
ಈ ಸಂದರ್ಭ ಎಸ್ಕೆಎಸ್ಸೆಸ್ಸೆಫ್ ಹಳೆಯಂಗಡಿ ಯೂನಿಟ್ ಅಧ್ಯಕ್ಷ ಯಹ್ಯಾ ಫರಂಗಿಬೊಟ್ಟು, ಕಾರ್ಯದರ್ಶಿ ಝೈನುದ್ದಿನ್ ರೈಲ್ವೆಗೇಟ್, ಬೊಳ್ಳೂರು ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಅಲ್ಫಾಝ್ ಬೊಳ್ಳೂರು, ಕಾರ್ಯದರ್ಶಿ ಅಲ್ಪಾಝ್ ಇಂದಿರಾ ನಗರ, ಮೆಮೋರಿಯಲ್ ಫೌಂಡೇಶನ್ ಅಧ್ಯಕ್ಷ ಬಿ.ಇ.ಮುಹಮ್ಮದ್, ಬೊಳ್ಳೂರು ಮಸೀದಿಯ ಅಧ್ಯಕ್ಷ ಬಿ.ಎಂ.ಇಬ್ರಾಹೀಂ, ಕಾರ್ಯದರ್ಶಿ ಹನೀಫ್ ಐ.ಎ.ಕೆ., ಲೆಕ್ಕ ಪರಿಶೋಧಕ ಸುಲೈಮಾನ್ ಇಂದಿರಾ ನಗರ, ಶರೀಫ್ ಇಂದಾದಿ, ರಿಯಾಝ್ ಫೈಝಿ ಮತ್ತಿತರರು ಉಪಸ್ಥಿತರಿದ್ದರು.