ಮಣಿಪಾಲದಲ್ಲಿ ಉದ್ಘಾಟನೆಗೊಂಡ ಸಿರಿಗನ್ನಡ ಪುಸ್ತಕ ಮಳಿಗೆ

Update: 2020-06-26 16:28 GMT

ಉಡುಪಿ, ಜೂ.26: ಕನ್ನಡ ಪುಸ್ತಕ ಪ್ರಾಧಿಕಾರದ ‘ಸಿರಿಗನ್ನಡ ಪುಸ್ತಕ ಮಳಿಗೆ’ ಮಣಿಪಾಲ ಶಾಖೆಯನ್ನು ಮಾಹೆಯ ಕುಲಪತಿಗಳಾದ ಡಾ.ಎಚ್. ವಿನೋದ್ ಭಟ್ ಶು್ರವಾರ ಮಣಿಪಾಲದಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಹೆ ವಿವಿ, ಮಣಿಪಾಲ ಯುನಿವರ್ಸಲ್ ಪ್ರೆಸ್ ಸಹಯೋಗದೊಂದಿಗೆ ಈ ಮಳಿಗೆ ಮುಂದಿನ ದಿನಗಳಲ್ಲಿ ಸಾಹಿತ್ಯಾಸಕ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣವನ್ನು ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಈ ಮಳಿಗೆಯಲ್ಲಿ ಕೇವಲ ಎಂಯುಪಿ ಯ ಪುಸ್ತಕಗಳಲ್ಲದೇ ಪ್ರಾದೇಶಿಕ ಪ್ರಕಾಶಕರ ಪುಸ್ತಕಗಳೂ ದೊರಕುವಂತೆ ಆಗಿರುವುದು ಸಂತಸದ ವಿಷಯ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿಯ ಹಿರಿಯ ಸಾಹಿತಿ ಹಾಗೂ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ, ಕನ್ನಡ ಪುಸ್ತಕ ಪ್ರಾಧಿಕಾರ ಬೆಳೆದು ಬಂದ ವಿವಿಧ ಹಂತಗಳನ್ನು ಮೆಲುಕು ಹಾಕುವ ಜೊತೆಗೆ ಉಡುಪಿ-ಮಣಿಪಾಲ ಪರಿಸರದಲ್ಲಿ ಪ್ರಾರಂಭಗೊಂಡ, ತಮ್ಮಂತಹ ಅನೇಕರಿಗೆ ಬಾಲ್ಯದಿಂದಲೂ ಕನ್ನಡ ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಳ್ಳಲು ನೆರವಾದ ಪುರವಣಿಗಳನ್ನು ಪ್ರಶಂಸಿಸಿದರು.

ಮಣಿಪಾಲ ಯುನಿವರ್ಸಲ್ ಪ್ರೆಸ್‌ನ ಪ್ರಧಾನ ಸಂಪಾದಕ ರಾದ ಡಾ.ನೀತಾ ಇನಾಂದಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಸಾಹಿತಿ ಹಾಗೂ ಉಪನ್ಯಾಸಕಿ ಕಾತ್ಯಾಯಿನಿ ಕುಂಜಿಬೆಟ್ಟು, ಗೋಪಾಲಕೃಷ್ಣ ಅಡಿಗರ ಕವನವನ್ನು ಹಾಗು ರಂಗಭೂಮಿ ಕಲಾವಿದೆ ರೇವತಿ ನಾಡಗೀರ ತಮ್ಮ ಕವನವನ್ನು ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News