×
Ad

ಬಜ್ಪೆಯಲ್ಲಿ ಶಾರ್ಟ್ ಸರ್ಕ್ಯೂಟ್ ‌ಆಗಿ ಕಾರಿಗೆ ಬೆಂಕಿ

Update: 2020-06-26 22:30 IST

ಮಂಗಳೂರು, ಜೂ. 26: ಚಲಿಸುತ್ತಿದ್ದ ಟೂರಿಸ್ಟ್ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಹೊರವಲಯದ ಬಜಪೆ ಎಕ್ಕಾರು ಸಮೀಪದ ಅರಸುಪದವು ಎಂಬಲ್ಲಿ ಶುಕ್ರವಾರ ನಡೆದಿದೆ.

ಬೆಳ್ತಂಗಡಿ ಮೂಲದ ಕೇಶವ್ ಗೌಡ ಎಂಬವರಿಗೆ ಸೇರಿದ ಕಾರಿಗೆ ಬೆಂಕಿ ತಗುಲಿತ್ತು. ಘಟನೆ ಸಂಭವಿಸಿದಾಗ ಒಳಗಿದ್ದವರು ತಕ್ಷಣ ಹೊರಗೆ ಬರುವಷ್ಟರಲ್ಲಿ ಬೆಂಕಿ ಜ್ವಾಲೆ ಇಡೀ ಕಾರನ್ನು ವ್ಯಾಪಿಸಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ.

ಬೆಂಕಿ ಅವಘಡ ಸಂಭವಿಸಿರುವುದು ಗುಡ್ಡಗಾಡು ಪ್ರದೇಶವಾದ್ದರಿಂದ ಕಾರಿನಲ್ಲಿ ಪ್ರಯಾಣಿಸುವವರು ಗಾಬರಿಯಲ್ಲಿದ್ದರು. ನಂತರ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಸಂಪೂರ್ಣವಾಗಿ ಬೆಂಕಿ ನಂದಿಸಿದರು. ಕೇಶವ್ ಗೌಡ ಕುಟುಂಬವು ಕಟೀಲು ದೇವಳಕ್ಕೆ ಆಗಮಿಸಿ ನೆಲ್ಲಿತೀರ್ಥ ದೇವಳಕ್ಕೆ ಹೋಗುವ ದಾರಿಯಲ್ಲಿ ಈ ದುರ್ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಬಜ್ಪೆ ಪೊಲೀರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News