ಸತತ 21ನೇ ದಿನ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ

Update: 2020-06-27 05:05 GMT

ಹೊಸದಿಲ್ಲಿ, ಜೂ.27: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸತತ 21ನೇ ದಿನವೂ ಏರಿಕೆಯಾಗಿದ್ದು,ರಾಷ್ಟ್ರರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ದರ 80.38ರೂ. ಹಾಗೂ ಡೀಸೆಲ್ ದರ 80.40ಕ್ಕೆ ತಲುಪಿದೆ.

ಕೋವಿಡ್-19ಸೋಂಕು ಭೀತಿಯಿಂದಾಗಿ ಜಾರಿಯಲ್ಲಿದ್ದ ಲಾಕ್‌ಡೌನ್ ಸಡಿಲಿಕೆ ಬಳಿಕ ಜೂನ್ 7ರಿಂದ ಇಂಧನ ದರ ಪರಿಷ್ಕರಣೆ ಆರಂಭಿಸಲಾಗಿದೆ. ಅಂದಿನಿಂದಲೂ ತೈಲ ದರ ಏರುಗತಿಯಲ್ಲಿ ಸಾಗುತ್ತಿದೆ. ಶನಿವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕ್ರಮವಾಗಿ 25ಪೈಸೆ ಹಾಗೂ 21 ಪೈಸೆ ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News