×
Ad

ಅಲಿಗಢ: ದಂಪತಿ ಸಹಿತ ಮೂವರ ಸಾವು

Update: 2020-06-27 11:08 IST

ಲಕ್ನೊ, ಜೂ.27: ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಗುಂಡಿಕ್ಕಿ ಸಾಯಿಸಿದ್ದಲ್ಲದೆ, ಬಳಿಕ ಸ್ವತಃ ಸಾವನ್ನಪ್ಪಿದ್ದಾನೆ. ವ್ಯಕ್ತಿಯ ಸಹೋದರ ತನ್ನ ಮನೆಯಲ್ಲಿ ಅಣ್ಣ-ಅತ್ತಿಗೆಯ ಮೃತದೇಹವನ್ನು ನೋಡಿ ಆಘಾತಕ್ಕೊಳಗಾಗಿ ಗುಂಡಿಕ್ಕಿಕೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಕುಟುಂಬದ ಮೂವರು ಸಾವನ್ನಪ್ಪಿರುವ ಈ ಆಘಾತಕಾರಿ ಘಟನೆಯು ಅಲಿಗಢ ಜಿಲ್ಲೆಯ ಬನ್ನಾದೇವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಆತ್ಮಹತ್ಯೆಗೆ ಶರಣಾದವರನ್ನು ಶೈಲೇಂದ್ರ ವರ್ಮಾ(30), ಆತನ ಪತ್ನಿ ಪಿಂಕಿ(27) ಹಾಗೂ ಸಹೋದರ ವಿಶಾಲ್(25) ಎಂದು ಗುರುತಿಸಲಾಗಿದೆ.

"ಗುರುವಾರ ಮಧ್ಯಾಹ್ನ 12:30ರ ಸುಮಾರಿಗೆ ಘಟನೆ ನಡೆದಿದೆ. ಕುಟುಂಬ ಸದಸ್ಯರು ಕೊಠಡಿಯಲ್ಲಿ ಗನ್ ಸಿಡಿದ ಶಬ್ದವನ್ನು ಕೇಳಿದ್ದನ್ನು ನೋಡಲು ಹೋದಾಗ ಶೈಲೇಂದ್ರ ಹಾಗೂ ಪಿಂಕಿ ರಕ್ತದ ಮಡುವಿನಲ್ಲಿದ್ದರು. ಆಘಾತವನ್ನು ತಾಳಲಾರದೆ ಶೈಲೇಂದ್ರ ಅವರ ಕಿರಿಯ ಸಹೋದರ, ವಿದ್ಯಾರ್ಥಿಯಾಗಿರುವ ವಿಶಾಲ್(25) ಸ್ವತಃ ತಲೆಗೆ ಗುಂಡಿಟ್ಟುಕೊಂಡು ಸಾವನ್ನಪ್ಪಿದ್ದಾನೆ'' ಎಂದು ಹಿರಿಯ ಸಬ್-ಇನ್ಸ್‌ಪೆಕ್ಟರ್ ಪ್ರದೀಪ್ ಕುಮಾರ್ ಹೇಳಿದ್ದಾರೆ.

"ಪರಸ್ಪರ ಪ್ರೀತಿಸುತ್ತಿದ್ದ ಶೈಲೇಂದ್ರ ಹಾಗೂ ಪಿಂಕಿ ಕೇವಲ 7 ತಿಂಗಳ ಹಿಂದೆ ವಿವಾಹವಾಗಿದ್ದರು.ಆದರೆ ವಿವಾಹವಾದ ಬಳಿಕ ಪ್ರತಿದಿನ ಪರಸ್ಪರ ಜಗಳ ಮಾಡಿಕೊಳ್ಳುತ್ತಿದ್ದರು. ಸುಸೈಡ್ ನೋಟ್ ಬರೆದಿದ್ದ ಶೈಲೇಂದ್ರ ಫೇಸ್‌ಬುಕ್ ಲೈವ್‌ನಲ್ಲಿ ಪತ್ನಿಯೊಂದಿಗಿನ ಕೆಲವು ವಿಚಾರಗಳಿಗೆ ಸಂಬಂಧಿಸಿ ಒತ್ತಡ ಎದುರಿಸುತ್ತಿದ್ದೆ. ಹೀಗಾಗಿ ನಾನು ಸ್ವತಃ ಸಾವಿಗೆ ಶರಣಾಗಿ, ಪತ್ನಿಯನ್ನು ಸಾಯಿಸಲು ನಿರ್ಧರಿಸಿದ್ದೇನೆ ಎಂದು ಹೇಳಿಕೊಂಡಿದ್ದ''ಎಂದು ಪ್ರದೀಪ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News