ಉಳ್ಳಾಲ: ಕೊರೋನ ವೈರಸ್ ಕುರಿತು ಜಾಗೃತಿ ಕಾರ್ಯಕ್ರಮ

Update: 2020-06-27 11:37 GMT

ಉಳ್ಳಾಲ : ಕೊರೋನ ವೈರಸ್ ಕುರಿತು  ಜಾಗೃತಿ ಮೂಡಿಸುವ ದೃಷ್ಟಿಯಿಂದ ಉಳ್ಳಾಲ ದರ್ಗಾ ಆಡಳಿತ ಸಮಿತಿ ಕೊರೋನ ವೈರಸ್ ಬಗ್ಗೆ    ಪೂರ್ಣ ಮಾಹಿತಿ ಮತ್ತು ಪಾಲಿಸ ಬೇಕಾದ ಅಗತ್ಯ ಕ್ರಮಗಳ ಕುರಿತು ಜಾಗೃತಿ ಉಪನ್ಯಾಸ  ಕಾರ್ಯಕ್ರಮವನ್ನು ಉಳ್ಳಾಲ ದರ್ಗಾ ಕಾಂಪೌಂಡ್ ನಲ್ಲಿ   ಶುಕ್ರವಾರ ಏರ್ಪಡಿಸಿತ್ತು. 

ಕೆ.ಎಂ.ಸಿ.ಫ್ರೊ. ಡಾ.ತಾಜುದ್ದೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಬಗ್ಗೆ ಮಾಹಿತಿ ನೀಡಿದರು. ಜಾಗತಿಕವಾಗಿ 98 ಲಕ್ಷ ಜನ ಈ ರೋಗಕ್ಕೆ ಬಾಧಿತರಾಗಿದ್ದಾರೆ. ಸುಮಾರು 4.97 ಲಕ್ಷ ಜನ ಜೀವ ಕಳೆದುಕೊಂಡಿದ್ದಾರೆ. ಇಲ್ಲಿ ನಾವು ಮಾಡಬೇಕಾದ್ದು ಜಾಗೃತಿಯಾಗಿದೆ. ‌ರೋಗಿಗಳು ಮನೆಯಲ್ಲೇ ಉಳಿದುಕೊಂಡರೆ ಒಳ್ಳೆಯದು. ಕಾಯಿಲೆ ಬಗ್ಗೆ ತಪ್ಪು ಕಲ್ಪನೆ ಬೇಡ ಎಂದರು.

ದರ್ಗಾ ಅಧ್ಯಕ್ಷ ರಶೀದ್ ಹಾಜಿ ಮಾತನಾಡಿದರು‌. ಫಾರೂಕ್ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಯ್ಯದ್ ಸರ್ಫಾನಿ ಅಲ್ ಹಾದಿ ರಬ್ಬಾನಿ ತಂಙಳ್ ನೇತೃತ್ವ ವಹಿಸಿದ್ದರು. ಪದಾಧಿಕಾರಿಗಳಾದ ಯು.ಕೆ.ಮೋನು ಇಸ್ಮಾಯಿಲ್, ಬಾವಾ ಮುಹಮ್ಮದ್, ಮುಹಮ್ಮದ್ ತ್ವಾಹ, ಅಯಾಝ್ ಇಸ್ಮಾಯಿಲ್, ಯು.ಕೆ.ಇಲ್ಯಾಸ್, ಆಸಿಫ್ ಅಬ್ದುಲ್ಲಾ, ಅಮೀರ್, ಇಬ್ರಾಹಿಂ, ಜೆ. ಅಬ್ದುಲ್ ಹಮೀದ್, ದರ್ಗಾ ಅಧೀನದ ಮೊಹಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News