ಉಡುಪಿ: ಸಂಪರ್ಕ ಮಾಹಿತಿ ಮುಚ್ಚಿಟ್ಟ ಕೊರೋನ ಸೋಂಕಿತರ ವಿರುದ್ಧ ಪ್ರಕರಣ ದಾಖಲು
Update: 2020-06-27 17:24 IST
ಉಡುಪಿ, ಜೂ.27: ಟ್ರಾವೆಲ್ ಹಿಸ್ಟರಿ ಮತ್ತು ಪ್ರಾಥಮಿಕ ಸಂಪರ್ಕದ ಬಗ್ಗೆ ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿರುವ ಜಿಲ್ಲೆಯ ಇಬ್ಬರು ಕೋವಿಡ್-19 ಸೋಂಕಿತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ರೋಗಿ ಸಂಖ್ಯೆ 10186 ಮತ್ತು 10187 ಇವರು ತಪ್ಪು ಮಾಹಿತಿ ನೀಡಿದ ಕಾರಣ ಇವರ ಸಂಪರ್ಕಿತರನ್ನು ಶೀಘ್ರವಾಗಿ ಪತ್ತೆ ಹಚ್ಚಲು ತೊಂದರೆ ಆಗಿದೆ. ಈ ರೀತಿ ಮಾಹಿತಿ ಮುಚ್ಚಿಡುವುದು ಅಪರಾಧವಾಗಿದೆ. ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.