ಫೇಸ್ ಬುಕ್ ಗೆ ಜಾಹೀರಾತು ನೀಡುವುದನ್ನು ನಿಲ್ಲಿಸಿದ ಹಲವು ಕಂಪೆನಿಗಳು: 7 ಶತಕೋಟಿ ಡಾಲರ್ ಕಳೆದುಕೊಂಡ ಝುಕರ್ ಬರ್ಗ್

Update: 2020-06-27 13:26 GMT

ವಾಷಿಂಗ್ಟನ್: ಫೇಸ್ ಬುಕ್ ತನ್ನ ನ್ಯೂಸ್ ಫೀಡ್‍ ನಿಂದ ದ್ವೇಷದ ಹೇಳಿಕೆಗಳು ಹಾಗೂ ತಪ್ಪು ಮಾಹಿತಿ ಮೇಲೆ ಸಮರ್ಪಕ ನಿಗಾ ಇಡಲು ವಿಫಲವಾಗಿದೆ ಎಂದು ದೂರಿ ಈ ಸಾಮಾಜಿಕ ಜಾಲತಾಣದಿಂದ ಹಲವಾರು ಕಂಪೆನಿಗಳು ತಮ್ಮ ಜಾಹೀರಾತುಗಳನ್ನು ವಾಪಸ್ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರ ಬಳಿಯಿರುವ ಒಟ್ಟು ಸಂಪತ್ತಿನ ಮೌಲ್ಯ 7.2 ಶತಕೋಟಿ ಡಾಲರ್‍ ನಷ್ಟು ಕಡಿಮೆಯಾಗಿ ಬಿಟ್ಟಿದೆ.

ಶುಕ್ರವಾರ ಕಂಪೆನಿಯ ಶೇರು ಮೌಲ್ಯ ಕೂಡ ಶೇ 8.3ರಷ್ಟು ಕುಸಿತ ಕಂಡಿದ್ದು, ಇದು ಮೂರು ವರ್ಷಗಳಲ್ಲಿಯೇ ಗರಿಷ್ಠ ಕುಸಿತವಾಗಿದೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜಾಹೀರಾತು ನೀಡುವ ಸಂಸ್ಥೆಯಾದ ಯುನಿಲಿವರ್ ಕೂಡ  ಫೇಸ್ ಬುಕ್‍ ನಿಂದ ಜಾಹೀರಾತು ವಾಪಸ್ ಪಡೆದ ಇತರ ಸಂಸ್ಥೆಗಳ ಜತೆ ಸೇರಿದ ನಂತರದ ಬೆಳವಣಿಗೆ ಇದಾಗಿದೆ.

ಶುಕ್ರವಾರ ಫೇಸ್ ಬುಕ್ ಶೇರು ಬೆಲೆ ಕುಸಿತದಿಂದಾಗಿ ಫೇಸ್ ಬುಕ್‍ ನ ಮಾರುಕಟ್ಟೆ ಮೌಲ್ಯದಿಂದ 56 ಶತಕೋಟಿ ಡಾಲರ್ ಕಡಿಮೆಯಾಗಿ ಝುಕರ್ ಬರ್ಗ್ ಅವರ ಒಟ್ಟು ಸಂಪತ್ತು 82.3 ಬಿಲಿಯನ್ ಡಾಲರ್‍ಗೆ ಕುಸಿದಿದೆ.

ಜೆಫ್ ಬೆಝೋಸ್ ಹಾಗೂ ಬಿಲ್ ಗೇಟ್ಸ್ ಜತೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಗೆ ಲೂಯಿಸ್ ವಿಯುಟ್ಟನ್ ಮಾಲಕ ಬರ್ನಾಡ್ ಅರ್ನಾಲ್ಟ್ ಏರುವುದರೊಂದಿಗೆ ಮಾರ್ಕ್ ಝುಕರ್ ಬರ್ಗ್ ನಾಲ್ಕನೇ ಸ್ಥಾನಕ್ಕೆ ಕುಸಿಯುವಂತಾಗಿದೆ.

ವೆರಿಝಾನ್ ಕಮ್ಯುನಿಕೇಶನ್ಸ್‍ ನಿಂದ ಹಿಡಿದು ಹೆರ್ಷೆ ಕೋ ತನಕ ಹಲವು ಕಂಪೆನಿಗಳು ಸೋಶಿಯಲ್ ಮೀಡಿಯಾ ಜಾಹೀರಾತುಗಳನ್ನು ನಿಲ್ಲಿಸಿ ಬಿಟ್ಟಿವೆ.

ಕೋಕಾ ಕೋಲಾ ಕೂಡ ತಾನು 30 ದಿನಗಳ ಕಾಲ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡುವುದನ್ನು ನಿಲ್ಲಿಸುವುದಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News