×
Ad

ಉಡುಪಿ: ಶನಿವಾರ ಮತ್ತೆ 14 ಮಂದಿಯಲ್ಲಿ ಕೊರೋನ ಸೋಂಕು ದೃಢ

Update: 2020-06-27 21:01 IST

ಉಡುಪಿ, ಜೂ. 27: ಜಿಲ್ಲೆಯಲ್ಲಿ ಶನಿವಾರ ಇನ್ನೂ 14 ಮಂದಿಯ ಕೋವಿಡ್- 19 ಸ್ಯಾಂಪಲ್ ಪರೀಕ್ಷೆ ಪಾಸಿಟಿವ್ ಫಲಿತಾಂಶ ನೀಡಿದೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಪಾಸಿಟಿವ್ ಬಂದವರ ಸಂಖ್ಯೆ 1139ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಮಹಾರಾಷ್ಟ್ರದಿಂದ ಆಗಮಿಸಿದ ಐವರು, ತೆಲಂಗಾಣ, ಬೆಂಗಳೂರು ಹಾಗೂ ಕುಮಟಗಳಿಂದ ಆಗಮಿಸಿದ ತಲಾ ಒಬ್ಬರು, ಅಲ್ಲದೇ ಉಡುಪಿ ಜಿಲ್ಲೆಯ ಆರು ಮಂದಿಯಲ್ಲಿ ಇಂದು ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ ಎಂದು ಅವರು ವಿವರಿಸಿದರು.

ಇಂದು ಸ್ಯಾಂಪಲ್ ಪಾಸಿಟಿವ್ ಬಂದವರಲ್ಲಿ ಉಡುಪಿ ತಾಲೂಕಿನ ಏಳು ಮಂದಿ ಹಾಗೂ ಕುಂದಾಪುರ ತಾಲೂಕಿನ ಏಳು ಮಂದಿ ಸೇರಿದ್ದಾರೆ. ಏಳು ಮಂದಿ ಪುರುಷರು, ಆರು ಮಂದಿ ಮಹಿಳೆಯರು ಹಾಗೂ 6 ವರ್ಷ ಪ್ರಾಯದ ಬಾಲಕಿಯಲ್ಲಿ ಇಂದು ಸೋಂಕು ಪತ್ತೆಯಾಗಿದೆ. ಪಾಸಿಟಿವ್ ಬಂದವರಲ್ಲಿ 60 ವರ್ಷ ಮೇಲಿನ ಮೂವರು ಪುರುಷರು ಹಾಗು ಓರ್ವ ಮಹಿಳೆ ಇದ್ದಾರೆ.

ಇಂದು ಸ್ಯಾಂಪಲ್ ಪಾಸಿಟಿವ್ ಬಂದವರಲ್ಲಿ ಉಡುಪಿ ತಾಲೂಕಿನ ಏಳು ಮಂದಿ ಹಾಗೂ ಕುಂದಾಪುರ ತಾಲೂಕಿನ ಏಳು ಮಂದಿ ಸೇರಿದ್ದಾರೆ. ಏಳು ಮಂದಿ ಪುರುಷರು, ಆರು ಮಂದಿ ಮಹಿಳೆಯರು ಹಾಗೂ 6 ವರ್ಷ ಪ್ರಾಯದ ಬಾಲಕಿಯಲ್ಲಿ ಇಂದು ಸೋಂಕು ಪತ್ತೆಯಾಗಿದೆ. ಪಾಸಿಟಿವ್ ಬಂದವರಲ್ಲಿ 60 ವರ್ಷ ಮೇಲಿನ ಮೂವರು ಪುರುಷರು ಹಾಗೂ ಓರ್ವ ಮಹಿಳೆ ಇದ್ದಾರೆ. ಸ್ಥಳೀಯವಾಗಿ ಪಾಸಿಟಿವ್ ಬಂದ ಆರು ಮಂದಿಯಲ್ಲಿ ಮೂವರು ಮಹಾರಾಷ್ಟ್ರದಿಂದ ಬಂದು ಪಾಸಿಟಿವ್ ಆದವರ ಪ್ರಾಥಮಿಕ ಸಂಪರ್ಕಿತರಾದರೆ, ಉಳಿದ ಮೂವರು ಇತ್ತೀಚೆಗೆ ಪಾಸಿಟಿವ್ ಆದ ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಇವರೆಲ್ಲರನ್ನೂ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಸೂಡ ತಿಳಿಸಿದರು.

ಇಬ್ಬರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ: ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಇಂದು ಒಟ್ಟು 10 ಮಂದಿ ಗುಣಮುಖರಾಗಿ ಬಿಡುಗಡೆಗೊಂ ಡಿದ್ದಾರೆ. ಇದರಿಂದ ಬಿಡುಗಡೆಗೊಂಡವರ ಒಟ್ಟು ಸಂಖ್ಯೆ 1047ಕ್ಕೇರಿದೆ. ಇನ್ನು ಕೇವಲ 90 ಮಂದಿ ಮಾತ್ರ ಜಿಲ್ಲೆಯಲ್ಲಿ ಕೋವಿಡ್-19ಗಾಗಿ ಚಿಕಿತ್ಸೆಯಲ್ಲಿದ್ದಾರೆ ಎಂದವರು ಹೇಳಿದರು.

ಇವರಲ್ಲಿ ಇಬ್ಬರು ಹಿರಿಯ ನಾಗರಿಕರ ಸ್ಥಿತಿ ಗಂಭೀರವಿದ್ದು, ಇಬ್ಬರಿಗೂ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗುರುವಾರ ಪಾಸಿಟಿವ್ ಬಂದ ಉಚ್ಚಿಲದ 62ರ ವೃದ್ಧರು ಈಗಲೂ ವೆಂಟಿಲೇಟರ್‌ನಲ್ಲೇ ಇದ್ದರೆ, ಬೈಂದೂರಿನ ಮತ್ತೊಬ್ಬರಿಗೆ ಇಂದು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ಡಿಎಚ್‌ಓ ವಿವರಿಸಿದರು.

ಇಂದು ಬಂದ 14 ಪಾಸಿಟಿವ್‌ಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಈಗ 1139ಕ್ಕೇರಿದೆ. ಉಡುಪಿ ಜಿಲ್ಲೆ ಈಗಲೂ ಬೆಂಗಳೂರು ನಗರ (2531) ಹಾಗೂ ಕಲಬುರಗಿ (1364) ಬಳಿಕ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಯಾದಗಿರಿ 929 ಮತ್ತು ಬಳ್ಳಾರಿ 626 ಕೇಸುಗಳೊಂದಿಗೆ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.

173 ನೆಗೆಟಿವ್: ಶನಿವಾರ 173 ಮಂದಿಯ ಗಂಟಲುದ್ರವದ ಮಾದರಿ ನೆಗೆಟಿವ್ ಆಗಿ ಬಂದಿವೆ. ಅಲ್ಲದೇ ಇಂದು ಇನ್ನೂ ಒಟ್ಟು 167 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಸೋಂಕಿನ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಕೋವಿಡ್ ಸಂಪರ್ಕಿತರು 64, ಉಸಿರಾಟ ತೊಂದ ರೆಯ ಒಬ್ಬರು, ಶೀತಜ್ವರದಿಂದ ಬಳಲುವ 19 ಹಾಗೂ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದ 83 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದರು.

ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 14,127ಕ್ಕೇರಿದೆ. ಇವುಗಳಲ್ಲಿ ಈವರೆಗೆ 12658 ನೆಗೆಟಿವ್, 1139 ಪಾಸಿಟಿವ್ ಆಗಿವೆ. ಇನ್ನು ಒಟ್ಟು 332 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ. ಶನಿವಾರ 18 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ಕೋವಿಡ್ ಸಂಪರ್ಕಿತರು ಒಬ್ಬರು, ಉಸಿರಾಟ ತೊಂದರೆಯವರು 10 ಹಾಗೂ ಶೀತಜ್ವರದಿಂದ ಬಳಲುವ ಏಳು ಮಂದಿ ಸೇರಿದ್ದಾರೆ.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್‌ಗಳಿಂದ ಇಂದು 12 ಮಂದಿ ಬಿಡುಗಡೆಗೊಂಡಿದ್ದು, 75 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯು ತಿದ್ದಾರೆ. ಜಿಲ್ಲೆಯಲ್ಲಿ ಇಂದು ಕೊರೋನ ಸೋಂಕಿನ ಗುಣಲಕ್ಷಣದ 13 ಮಂದಿ ಸೇರಿದಂತೆ ಒಟ್ಟು 5786 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 709 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News