ಬೈಕಂಪಾಡಿ ಫ್ಯಾಕ್ಟರಿಯಲ್ಲಿ ಕಾರ್ಮಿಕ ಮೃತ್ಯು
Update: 2020-06-27 22:29 IST
ಮಂಗಳೂರು, ಜೂ.27: ನಗರದ ಬೈಕಂಪಾಡಿ ಫ್ಯಾಕ್ಟರಿಯೊಂದರಲ್ಲಿ ಸಿಮೆಂಟ್‌ಶೀಟ್ ಅಳವಡಿಸುತ್ತಿದ್ದ ವೇಳೆ ಕಾರ್ಮಿಕರೊಬ್ಬರು 20 ಅಡಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಪಜೀರು ನಿವಾಸಿ ರಾಜೇಶ್ ಆಚಾರ್ಯ (34) ಮೃತ ಕಾರ್ಮಿಕ ಎಂದು ಗುರುತಿಸಲಾಗಿದೆ.
ರಾಜೇಶ್ ಅವರು ಬೈಕಂಪಾಡಿ ಇಂಡಸ್ಟ್ರೀಯಲ್ ಎಸ್ಟೇಟ್‌ನಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಕಂಟ್ರಾಕ್ಟರ್ ತಿಳಿಸಿದಂತೆ ಶುಕ್ರವಾರ ಸಂಜೆ ಹಳೆಯ ಸಿಮೆಂಟ್‌ಶೀಟ್‌ಗಳನ್ನು ತೆಗೆದು ಹೊಸ ಶೀಟ್‌ಗಳನ್ನು ಅಳವಡಿಸುವ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಹಳೆಯ ಸಿಮೆಂಟ್‌ಶೀಟ್ ಎಂದು ಕೊಂಡು ಪ್ಲಾಸ್ಟಿಕ್ ಶೀಟಿಗೆ ಕಾಲಿಟ್ಟಾಗ ಪ್ಲಾಸ್ಟಿಕ್ ಶೀಟ್ ತುಂಡಾಗಿ ಫ್ಯಾಕ್ಟರಿ ಒಳಗಡೆ ಸುಮಾರು 20 ಅಡಿ ಮೇಲಿನಿಂದ ಬಿದ್ದಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.