×
Ad

ಮಂಗಳೂರು: ಪಿಯು ಕಾಲೇಜು ಮುಚ್ಚುಗಡೆಗೆ ಎನ್‌ಎಸ್‌ಯುಐ ವಿರೋಧ

Update: 2020-06-27 22:55 IST

ಮಂಗಳೂರು, ಜೂ.27: ಮಂಗಳೂರು ವಿಶ್ವವಿದ್ಯಾನಿಲಯದ ಕೊಣಾಜೆ ಕ್ಯಾಂಪಸ್‌ನಲ್ಲಿ 2017ರಲ್ಲಿ ಆರಂಭಿಸಿದ್ದ ಪ್ರಥಮ ದರ್ಜೆ ಕಾಲೇಜನ್ನು ಮುಚ್ಚುಗಡೆ ಮಾಡಲು ನಿರ್ಧರಿಸಿರುವ ಮಂಗಳೂರು ವಿವಿಯ ನಿರ್ಧಾರಕ್ಕೆ ಎನ್‌ಎಸ್‌ಯುಐ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಆರ್ಥಿಕ ಹೊರೆ ಕಡಿಮೆಗೊಳಿಸುವ ಉದ್ದೇಶದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಕಾಲೇಜನ್ನೇ ಬಂದ್ ಮಾಡಲು ವಿವಿ ತಿರ್ಮಾನಿಸಿರುವು ದರಿಂದ ಹಲವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಡೆತ ಬೀಳಲಿದೆ. 2021-22ನೇ ಅವಧಿಗೆ ಪ್ರವೇಶಾತಿ ಸ್ಥಗಿತಗೊಳಿಸಿದ್ದರಿಂದ ಮೊದಲ ಹಾಗೂ ದ್ವೀತಿಯ ವರ್ಷವನ್ನು ಪೂರ್ಣಗೊಳಿಸಿರುವ ವಿದ್ಯಾರ್ಥಿಗಳನ್ನು ಅವರು ಅಪೇಕ್ಷಿಸುವ ಹತ್ತಿರದ ಕಾಲೇಜ್‌ಗಳಿಗೆ ವರ್ಗಾವಣೆ ಮಾಡುವ ಸಂಬಂಧ ವಿ.ವಿ ಚಿಂತನೆ ನಡೆಸಿರುವ ಬಗ್ಗೆಯೂ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಖಂಡಿಸಿದ್ದಾರೆ.

ಇದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ನಷ್ಟವಾಗಲಿದೆ. ಹಾಗಾಗಿ ಸರಕಾರ ಕಾಲೇಜನ್ನು ಮುಂದುವರಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಕ್ಕೆ ಉಂಟಾ ಗದಂತೆ ಪರಿಹಾರ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News