×
Ad

ದ.ಕ. ಜಿಲ್ಲೆ : ಕೊರೋನ ವೈರಸ್ ಗೆ ಯುವಕ ಸೇರಿ ಇಬ್ಬರು ಬಲಿ

Update: 2020-06-28 09:42 IST

ಮಂಗಳೂರು : ಕೊರೋನ ವೈರಸ್ ಸೋಂಕಿಗೆ ಸುರತ್ಕಲ್ ನ ಯುವಕ ಮತ್ತು ಬಂಟ್ವಾಳ ತಾಲೂಕಿನ ಬಿ.ಕಸ್ಬಾ ಗ್ರಾಮದ ಲೊರೆಟೊಪದವಿನ ಮಹಿಳೆಯೊಬ್ಬರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುರತ್ಕಲ್ ನ 31 ವರ್ಷದ ಯುವಕ ಮತ್ತು ಬಂಟ್ವಾಳ ಲೊರೆಟೊಪದವಿನ ಸುಮಾರು 58 ವರ್ಷ ಪ್ರಾಯದ ಮಹಿಳೆ ಕೊರೋನ ವೈರಸ್ ಗೆ ಬಲಿಯಾಗಿದ್ದು, ದ.ಕ. ಜಿಲ್ಲೆಯಲ್ಲಿ ಕೊರೋನ ವೈರಸ್ ಗೆ ಬಲಿಯಾದವರ ಸಂಖ್ಯೆ 12ಕ್ಕೇರಿದೆ.

ಲೊರೆಟೊಪದವಿನ ಈ ಮಹಿಳೆ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ತಿಂಗಳಿಗೆ ಒಂದು ಬಾರಿ ಮಂಗಳೂರು ಆಸ್ಪತ್ರೆಯೊಂದರಲ್ಲಿ ಆರೋಗ್ಯ ತಪಾಸಣೆ ನಡೆಸುತ್ತಿದ್ದರು. ಅದರಂತೆ ವಾರದ ಹಿಂದೆ ಮಂಗಳೂರಿನಲ್ಲಿ ಆರೋಗ್ಯ ತಪಾಸಣೆ ನಡೆಸಿ ಮನೆಗೆ ಬಂದಿದ್ದು ಆ ಬಳಿಕ ಅವರ ಆರೋಗ್ಯ ತೀವ್ರ ಏರುಪೇರಾಗಿತ್ತು ಎಂದು ತಿಳಿದು ಬಂದಿದೆ.

ಮೂರು ದಿನದ ಹಿಂದೆ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶನಿವಾರ ರಾತ್ರಿ ಅವರು ಮೃತಪಟ್ಟಿದ್ದಾರೆ. ಅವರ ಗಂಟಲ ದ್ರವದ ವರದಿಯಲ್ಲಿ ಕೊರೋನ ದೃಢಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News