ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ

Update: 2020-06-28 16:34 GMT

ಉಡುಪಿ, ಜೂ.28: ತೆಂಕ ನಯಂಪಳ್ಳಿ- ಕಕ್ಕುಂಜೆ ಪರಿಸರದಲ್ಲಿ ರವಿವಾರ ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅಪರಿಚಿತ ಮಹಿಳೆಯೊಬ್ಬರನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿರುವ ಬಗ್ಗೆ ವರದಿಯಾಗಿದೆ.

ಉಡುಪಿ ಸೈಂಟ್ ಸಿಸಲಿಸ್ ವಿದ್ಯಾಸಂಸ್ಥೆಯ ಶಿಕ್ಷಕಿ ಡೇಸಾ, ಈ ಮಹಿಳೆ ಯನ್ನು ಉಪಚರಿಸಿ, ಆಹಾರ ಒದಗಿಸಿ ಮಾನವಿಯತೆ ಮೆರೆದಿದ್ದಾರೆ. ಈ ಬಗ್ಗೆ ಸ್ಥಳೀಯರು ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರಿಗೆ ಮಾಹಿತಿಯನ್ನು ನೀಡಿದ್ದರು. ಅದರನ್ನೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಈ ಮಹಿಳೆ ಹನುಮಂತನಗರದ ನಿವಾಸಿಯೊಬ್ಬರ ಪತ್ನಿ ಎಂದು ತಿಳಿದು ಬಂತು.

ಇವರು ನಾಪತ್ತೆಯಾಗಿರುವುದಾಗಿ ಇವರ ಪತಿ ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದರು. ನಂತರ ಮಹಿಳಾ ಪೊಲೀಸ್ ಸಿಬ್ಬಂದಿ ಮತ್ತು ಸಮಾಜಸೇವಕರು, ಈ ಮಹಿಳೆಯನ್ನು ಅವರ ಪತಿಯ ಮನವಿ ಯಂತೆ ಚಿಕಿತ್ಸೆಗಾಗಿ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗ ಆಸ್ಪತ್ರೆಗೆ ದಾಖಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News